Uncategorized

ಮೈಸೂರಿನಲ್ಲಿ ಎಟಿಎಂನಲ್ಲಿ ಸ್ಕಿಮ್ಮರ್ ಮಿಷನ್ ಬಳಸಿ ಹಣ ದೋಚುವ ಜಾಲ ಸಕ್ರಿಯ

ಮೈಸೂರು : ಮೈಸೂರಿನಲ್ಲಿ ಸ್ಕಿಮ್ಮರ್ ಬಳಸಿ ಸಕ್ಯೂರಿಟಿ ಇಲ್ಲದ ಎಟಿಎಂ ಯಂತ್ರಗಳಿಂದ ಹಣ ದೋಚುವ ಜಾಲ ಸಕ್ರಿಯವಾಗಿರುವುದು ಪತ್ತೆಯಾಗಿದೆ.

ನಗರದ ಶಾರದಾದೇವಿ ನಗರದ ಕೆನರಾ ಬ್ಯಾಂಕಿನ ಎಟಿಎಂನಲ್ಲಿ ಈ ರೀತಿ ಹಣ‌‌ ದೋಚುವ ಸ್ಕಿಮ್ಮರ್ ಯಂತ್ರ ದೊರಕಿರುವುದು ಜನರಲ್ಲಿ ಅತಂಕ ಮೂಡಿಸಿದೆ. ನಿವೃತ್ತ ಶಿಕ್ಷಕರೊಬ್ಬರು ಎಟಿಎಂನಲ್ಲಿ ಹಣ ಡ್ರಾ ಮಾಡಲು ತೆರಳಿದ್ದು, ಈ ವೇಳೆ ಅವರಿಗೆ ಸ್ಕಿಮ್ಮರ್ ಯಂತ್ರ ದೊರೆತಿದ್ದು, ಅದನ್ನು ಪೊಲೀಸರಿಗೆ ನೀಡಿ ದೂರು ದಾಖಲಿಸಿದ್ದಾರೆ.

ಈ ಎಟಿಎಂನಲ್ಲಿ ನಿವೃತ್ತ ಶಿಕ್ಷಕರೊಬ್ಬರು ಹಣ ಪಡೆಯಲು ಹೋಗಿದ್ದಾರೆ. ಅನುಮಾನದ ಮೇಲೆ ಎಟಿಎಂ ಹಾಕುವ ಜಾಗವನ್ನು ಅಲುಗಾಡಿಸಿದ್ದಾರೆ. ಈ ವೇಳೆ ಮೊದಲೇ ಅಳವಡಿಸಿದ್ದ ಸ್ಕಿಮ್ಮರ್​ ಯಂತ್ರ ಕಳಚಿ ಬಿದ್ದಿದೆ. ಇದನ್ನು ಕಂಡು ಗಾಬರಿಗೊಂಡ ಆ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಠಾಣೆಗೆ ಸ್ಕಿಮ್ಮರ್​ ಯಂತ್ರದ ಸಮೇತ ಬರಲು ಪೊಲೀಸರು ಸೂಚಿಸಿದ್ದಾರೆ. ಯಂತ್ರವನ್ನು ತೆಗೆದುಕೊಂಡು ಆ ವ್ಯಕ್ತಿ ನಗರ ಪೊಲೀಸ್​ ಕಮೀಷನರ್​ ಡಾ.ಚಂದ್ರಗುಪ್ತ ಅವರ ಬಳಿ ತೆರಳಿದಾಗ ಯಂತ್ರವನ್ನ ವಶಕ್ಕೆ ನೀಡಿದ್ದಾರೆ.

ಚಂದ್ರಗುಪ್ತ ಅವರ ಆದೇಶದ ಮೇರೆಗೆ ಸೈಬರ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೂ ಮುನ್ನ ಸೆಪ್ಟೆಂಬರ್​ 6ರಂದು ಇದೇ ವ್ಯಕ್ತಿ ಮಂಡ್ಯದ ಎಟಿಎಂವೊಂದರಲ್ಲಿ ಹಣ ಪಡೆದಿದ್ದರು. ಬಳಿಕ ಅವರ ಖಾತೆಯಿಂದ 5 ಸಾವಿರ ರೂಪಾಯಿ ಹೆಚ್ಚುವರಿಯಾಗಿ ಹಣ ಕಡಿತವಾಗಿತ್ತು. ತಮಗಾದ ಅನ್ಯಾಯದ ಬಗ್ಗೆ ಬ್ಯಾಂಕ್​ ಮತ್ತು ಸೈಬರ್​ ಠಾಣೆಗೆ ದೂರು ನೀಡಿದ್ದರು.

ಈ ವೇಳೆ ಸ್ಕಿಮ್ಮಿಂಗ್​ ಯಂತ್ರ ಬಳಸಿ ಹಣ ವಂಚನೆ ಮಾಡುವ ಬಗ್ಗೆ ತಿಳಿದುಕೊಂಡಿದ್ದರು. ಇದೀಗ ಮೈಸೂರಿನಲ್ಲಿ ಎಚ್ಚೆತ್ತುಕೊಂಡು ಪರಿಶೀಲಿಸಿದಾಗ ವಂಚನೆ ಜಾಲ ಬೆಳಕಿಗೆ ಬಂದಿದೆ. ಎಟಿಎಂ ಯಂತ್ರಗಳಲ್ಲಿ ಕಾರ್ಡ್ ಹಾಕುವ ಜಾಗ ಹಾಗೂ ಕೀಪ್ಯಾಡ್ ನ ಮೇಲೆ ಅದನ್ನೇ ಹೋಲುವ ಸ್ಕಿಮ್ಮರ್ ಯಂತ್ರಗಳನ್ನು ವಂಚಕರು ಅಳವಡಿಸಿರುತ್ತಾರೆ.

ಕಾರ್ಡ್​ನಲ್ಲಿನ ದತ್ತಾಂಶ ಹಾಗೂ ಕೀಪ್ಯಾಡ್​ನ ಮೇಲೆ ನಮೂದಿಸುವ ಪಾಸ್ ವರ್ಡ್ ಗಳು ಇಲ್ಲಿ ದಾಖಲಾಗುತ್ತವೆ. ನಂತರ ವಂಚಕರು ನಕಲಿ ಎಟಿಎಂ ಕಾರ್ಡ್ ತಯಾರಿಸಿ ಹಣ ಡ್ರಾ ಮಾಡಿಕೊಳ್ಳುತ್ತಾರೆ. ಮೈಸೂರು ನಗರ ಅತಿವೇಗವಾಗಿ ಬೆಳೆಯುತ್ತಿದ್ದು, ನಗರ ಬೆಳೆಯುತ್ತಿದ್ದಂತೆಯೇ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button