Uncategorized

ಜನರಿಗೆ ಆಸೆ, ಆಮಿಷ ಒಡ್ಡಿ ಮತಾಂತರ ಮಾಡುವುದು ತಪ್ಪು: ಅರವಿಂದ ಬೆಲ್ಲದ

ಧಾರವಾಡ: ನಮ್ಮ ದೇಶದಲ್ಲಿ ‌ಸಾರ್ವಜನಿಕರಿಗೆ ಧಾರ್ಮಿಕ ಸ್ವತಂತ್ರ ನೀಡಲಾಗಿದೆ. ಯಾರು ಯಾವ ಧರ್ಮವನ್ನು ಬೇಕಾದರೂ ಫಾಲೋ ಮಾಡಬಹುದು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಆಸೆ ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವುದು ತಪ್ಪು. ಹಾಗಾಗಿ ಮತಾಂತರ ನಿಷೇಧ ಕಾಯ್ದೆ ಇಂದು ತುಂಬಾ ಅವಶ್ಯಕವಾಗಿದೆ ಎಂದು ಶಾಸಕ ಅರವಿಂದ ಬೆಲ್ಲ‌ದ ಹೇಳಿದರು. ‌

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಆಸೆ, ಆಮಿಷಗನ್ನು ಒಡ್ಡಿ ಹಾಗೂ ಹಲವು ತಂತ್ರಗಳ‌ ಮೂಲಕ ಜನರನ್ನು ಮತಾಂತರ ಮಾಡಲಾಗುತ್ತಿದೆ. ಇದು ತಪ್ಪಬೇಕು ಎಂಬ ಆಶೆಯನ್ನು ನಮ್ಮ ಪಕ್ಷ ಹೊಂದಿದೆ.‌ ಬಲವಂತ ಹಾಗೂ ಆಮಿಷಗಳ ಮೂಲಕ ಮತಾಂತರ ಮಾಡುವವರ ವಿರುದ್ಧ ಕಠಿಣ ಕಾನೂನು ಇಂದು ಅವಶ್ಯವಾಗಿದೆ.‌ಆ ನಿಟ್ಟಿನಲ್ಲಿ ನಮ್ಮ‌ಸರ್ಕಾರ, ಗೃಹ ಮಂತ್ರಿಗಳು ಗಮನ ಹರಿಸಿ ಕಯ್ದೆಯನ್ನು ಜಾರಿಗೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ‌

Related Articles

Leave a Reply

Your email address will not be published.

Back to top button