Uncategorized

ಹಣ ಪೊಲೀಸ್ ಇಲಾಖೆಯನ್ನು ಕೊಂಡುಕೊಳ್ಳಬಾರದು: ಆರಗ ಜ್ಞಾನೇಂದ್ರ

ಉಡುಪಿ: ರಾಜ್ಯದಲ್ಲಿ ಪೊಲೀಸ್ ನೇಮಕಾತಿಗೆ ಲಂಚ ವಿಚಾರವಾಗಿ ಗ್ರಹ ಸಚಿವ ಅರಗ ಜ್ಞಾನೇಂದ್ರ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಲಂಚ ಕೇಳಿದವರ ಬಗ್ಗೆ ನನಗೆ ನೇರ ಮಾಹಿತಿ ಕೊಡಿ ಹಾಗೂ ಇಲ್ಲಿ ಯಾರು ಯಾರನ್ನು ಖರೀದಿ ಮಾಡಲು ಸಾಧ್ಯವಿಲ್ಲ ಆದ್ದರಿಂದ ನಾವು ಖರೀದಿಯ ಸರಕುಗಳು ಅಲ್ಲ ಹಾಗೂ ಕೆಲಸ ಪಡೆಯುವ ಉದ್ದೇಶದಿಂದ ಯಾರು ಹಣ ಕಳೆದುಕೊಳ್ಳಬೇಡಿ ನೇಮಕಾತಿ ಗೆ ಲಂಚ ವಿಚಾರದಲ್ಲಿ ಡಿಜಿಪಿ ಜೊತೆ ಮಾಡಿದ್ದೇನೆ ಹಾಗೂ ವಿಶೇಷವಾದ ತಂಡ ರಚನೆ ಮಾಡಿ ದಾಳಿಗಳನ್ನು ಮಾಡುತ್ತೇವೆ ಮತ್ತು ಪ್ರತಿ ಪೊಲೀಸ್ ಠಾಣೆ ಮೇಲೆ ನಿಗಾ ಇಡಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಎಸ್ ಐ ಪೋಸ್ಟ್ ಗೆ 25 ಲಕ್ಷ ಲಂಚ ತೆಗೆದುಕೊಂಡ ಬಗ್ಗೆ ಇದೀಗ ಬೆಂಗಳೂರಿನಲ್ಲಿ ದೂರು ದಾಖಲಾಗಿದೆ ಹಾಗೂ ನೇಮಕಾತಿ ಹಿಂದಿನ ಜಾಲವನ್ನು ಬಯಲಿಗೆಳೆಯುತ್ತೇವೆ. ಮೆರಿಟ್ ಮತ್ತು ಯೋಗ್ಯತೆ ಇರುವವರು ಪೊಲೀಸ್ ಇಲಾಖೆಗೆ ಬರಬೇಕು ಮತ್ತು ಹಣ ಪೊಲೀಸ್ ಇಲಾಖೆಯನ್ನು ಕೊಂಡುಕೊಳ್ಳಬಾರದು. ಲಂಚ ವಿಚಾರದಲ್ಲಿ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ಕೊಡಿ ಎಂದು ಉಡುಪಿಯಲ್ಲಿ ಗೃಹಸಚಿವ ಜ್ಞಾನೆಂದ್ರ ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button