ಮತಾಂತರ ಮಾಡಲು ನಾವು ಬಿಡುವುದಿಲ್ಲ; ಆಕ್ರೋಶ ಹೊರಹಾಕಿದ ಗೃಹಸಚಿವ
ಉಡುಪಿ: ಇಂದು ಉಡುಪಿ ಜಿಲ್ಲೆಯ ಜನತಾ ಪ್ರವಾಸ ಕೈಗೊಂಡಂತಹ ಗೃಹಸಚಿವ ಅರಗ ಜ್ಞಾನೆಂದ್ರ ಜಿಲ್ಲೆಯಲ್ಲಿ ಪೊಲೀಸ್ ವಸತಿ ಸಮುಚ್ಛಯ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಮತಾಂತರಕ್ಕೆ ಉಡುಪಿಯಲ್ಲಿ ಗೃಹಸಚಿವ ಅರಗ ಜ್ಞಾನೆಂದ್ರ ಎಚ್ಚರಿಕೆ ನೀಡಿದ್ದಾರೆ. ಮತಾಂತರ ಮಾಡಲು ನಾವು ಬಿಡುವುದಿಲ್ಲ ಹಾಗೂ ವಿಧಾನ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಅಲ್ಲಿ ಒಬ್ಬ ಶಾಸಕರು ತನ್ನ ತಾಯಿಯನ್ನೇ ಮತಾಂತರ ಮಾಡಿದ ಬಗ್ಗೆ ಹೇಳಿಕೊಂಡು ತನ್ನ ನೋವುವನ್ನು ಹೊರಹಾಕಿದ್ದಾರೆ ಹಾಗೂ ನನ್ನೂರ ಹತ್ತಿರಾನೂ ಹೀಗೆ ಆಗಿದೆ. ಅಲ್ಲಿ ಹೆಂಡತಿ ಹೇಳ್ತಾಳೆ ತುಳಸಿಕಟ್ಟೆ ಕಿತ್ತು ಹಾಕು ಅಂತ… ಆದರೆ ಗಂಡ ಹೇಳುತ್ತಾನೆ ತುಳಸಿಕಟ್ಟೆ ಇರಲಿ ಅಂತ…ಇವರ ಮನೆಯಲ್ಲಿ ಪ್ರತಿದಿನ ಫೈಟಿಂಗ್ ನಡೆಯುತ್ತಿದೆ ಎಂದು ಉಡುಪಿಯಲ್ಲಿ ಮತಾಂತರದ ಕರಾಳತೆ ಬಿಚ್ಚಿಟ್ಟ ಗೃಹ ಸಚಿವರು.
ಇದೀಗ ಮತಾಂತರ ಹೆಸರಿನಲ್ಲಿ ಒಂದೇ ಮನೆಯೊಳಗೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಎಲ್ಲರೂ ಅವರವರ ಧರ್ಮದಲ್ಲಿ ಚೆನ್ನಾಗಿರಲಿ ನೆಮ್ಮದಿಯಲ್ಲಿ ಇರಲಿ. ಇನ್ನೊಬ್ಬರ ಧರ್ಮ ಬದಲಾವಣೆ ಮಾಡುವ ವ್ಯವಸ್ಥಿತ ಜಾಲ ಇದೆ. ಆದ್ದರಿಂದ ನಾವು ಈ ಜಾಲವನ್ನು ನಾವು ಮಟ್ಟ ಹಾಕುತ್ತೇವೆ ಮತ್ತು ಇಂತಹ ಬೆಳವಣಿಗೆಯಿಂದ ಶಾಂತಿ-ಸುವ್ಯವಸ್ಥೆ ಕೆಡುತ್ತೆ ಊರೂರಲ್ಲಿ ಬೆಂಕಿ ಹೊತ್ತಿ ಕೊಂಡರೆ ಬಹಳ ಕಷ್ಟವಾಗುತ್ತದೆ. ಈ ನಿಟ್ಡಿನಲ್ಲಿ ವಿಶೇಷವಾದ ಕಾಯ್ದೆಯನ್ನು ಮುಂದಿನ ದಿನಗಳಲ್ಲಿ ತರುತ್ತೇವೆ ಹಾಗೂ ಪೊಲೀಸರಿಗೆ ಇನ್ನಷ್ಟು ಅಧಿಕಾರ ಕೊಡುತ್ತೇವೆ ಎಂದು ಗೃಹ ಸಚಿವರು ತಿಳಿಸಿದರು.
ಬಾಂಗ್ಲಾ ವಲಸಿಗರ ಬಗ್ಗೆ ಗೃಹಸಚಿವ ಕಿಡಿಕಿಡಿ
ಇದೇ ಸಂದರ್ಭದಲ್ಲಿ ಗೃಹ ಸಚಿವರು ರಾಜ್ಯದಲ್ಲಿ ಇದೀಗ ಬಾಂಗ್ಲಾ ವಲಸಿಗರ ಬಗ್ಗೆ ಕಿಡಿಕಾರಿದ್ದಾರೆ. ಬಾಂಗ್ಲಾದೇಶೀಯರನ್ನು ದೇಶದೊಳಗೆ ನುಗ್ಗಿಸುವ ಕೆಲಸ ಆಗುತ್ತಿದೆ. ಅಕ್ರಮ ವಲಸಿಗರಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಕೊಡಿಸಲಾಗುತ್ತದೆ. ಇದರ ಹಿಂದೆ ದೊಡ್ಡಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ಕೂಡ ಇದೆ. ಸದ್ಯದಲ್ಲೇ ಅವರನ್ನು ನಾವು ಮುಗಿಸುತ್ತೇವೆ ಎಂದರು.