Uncategorized

ಧಾರವಾಡ: ಮಹಿಳೆಯ ಪರ್ಸ್ ಕದ್ದು ಪರಾರಿ ಆಗುತ್ತಿದ್ದ ಕಳ್ಳನನ್ನು ಹಿಡಿದ ಸಾರ್ವಜನಿಕರು

ಧಾರವಾಡ : ಮಹಿಳೆಯ ಪರ್ಸ್ ಕದ್ದು ಪರಾರಿ ಆಗುತ್ತಿದ್ದ ಚಾಲಾಕಿ ಕಳ್ಳನನ್ನು ಹಿಡಿದು ಸಾರ್ವಜನಿಕರು ಗೂಸಾ ನೀಡಿ, ಬಳಿಕ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿರುವ ಘಟನೆ ಧಾರವಾಡ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆದಿದೆ.

ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕುಳಿತಿದ್ದ ಮಹಿಳೆಯೊಬ್ಬರ ಪರ್ಸ್​ನ್ನು ಚಾಲಾಕಿ ಕಳ್ಳ ಕದ್ದಿದ್ದಾನೆ. ಬಳಿಕ ಅಲ್ಲಿಂದ ಯಾರಿಗೂ ಅನುಮಾನ ಬರದ ಹಾಗೇ ಪರಾರಿ ಆಗಲು ಪ್ರಯತ್ನಿಸಿದ್ದಾನೆ‌. ಮಹಿಳೆ ಬಸ್ ಬಂದ ತಕ್ಷಣ ಎದ್ದು ಹೋಗಲು ಪರ್ಸ್ ನೋಡಿಕೊಂಡಿದ್ದಾರೆ. ಆಗ ಪರ್ಸ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಅಷ್ಟೊತ್ತಿಗೆ ಪರ್ಸ್ ಕದ್ದ ಚಾಲಕಿ ಬಸ ನಿಲ್ದಾಣದಿಂದ ಮುಂಭಾಗದ ಮುಖ್ಯ ರಸ್ತೆಗೆ ತೆರಳುತ್ತಿರುವುದನ್ನು ನೋಡಿದ ಮಹಿಳೆ ಸ್ಥಳೀಯರಿಗೆ ತಿಳಿಸಿದ್ದಾರೆ. ಕೂಡಲ್ಲೇ ಅಲರ್ಟ್ ಆದ ಸ್ಥಳೀಯರು ಚಾಲಾಕಿ ಕಳ್ಳನನ್ನು ಹಿಡಿದು ಗೂಸಾ ನೀಡಿದ್ದಾರೆ. ಬಳಿಕ ಬಸ್ ನಿಲ್ದಾಣದ ಚಾಲಕರು ಹಾಗೂ ಅಧಿಕಾರಿಗಳು ಅವನನ್ನು ಹಿಡಿದು ತಂದು ಪೊಲೀಸರಿಗೆ ಮಾಹಿತಿ‌ ನೀಡಿದ್ದಾರೆ.‌

ಇನ್ನೂ ಪೊಲೀಸರು ಸ್ಥಳಕ್ಕೆ ಬರುವ ಹೊತ್ತಿನವರೆಗೂ ಹಿಸ್ ಬಸ್ ನಿಲ್ದಾಣದ ಅಧಿಕಾರಿಗಳು ಕಳ್ಳನ ಕುರಿತು ಮಾಹಿತಿ ಸಂಗ್ರಕ್ಕೆ ಮುಂದಾಗಿದ್ದು, ಆದರೆ ಚಾಲಾಕಿ ಕಳ್ಳ ಯಾವುದೇ ತನ್ನ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ.

ಅಧಿಕಾರಿಗಳ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಉಪನಗರ ಠಾಣೆಯ ಪೊಲೀಸರು ಸದ್ಯ ಕಳನನ್ನು ವಶಕ್ಕೆ ಪಡೆದುಕೊಂಡು ಮಾಹಿತಿ ಕಲೆ ಹಾಕುತ್ತಿದ್ದಾರೆ.

Related Articles

Leave a Reply

Your email address will not be published.

Back to top button