Uncategorized

ಮುಡಾ ಸಿಎ ನಿವೇಶನ ಹಂಚಿಕೆ ಅರ್ಜಿ ಅಂತಿಮ ದಿನಾಂಕ ವಿಸ್ತರಣೆ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ನಿವೇಶನಗಳ ಹಂಚಿಕೆ ಅರ್ಜಿ ಅಂತಿಮ ದಿನಾಂಕ ವಿಸ್ತರಿಸಿದೆ. ಅರ್ಜಿಗಳನ್ನು ಪಡೆಯಲು ನಿಗದಿಗೊಳಿಸಿದ್ದ ಅಂತಿಮ ದಿನಾಂಕವನ್ನ ನವೆಂಬರ್ 6 ರವರೆಗೂ ವಿಸ್ತರಣೆ ಮಾಡಲಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ವಿ ರಾಜೀವ್ ಮಾತನಾಡಿ ಸಿ ಎ ನಿವೇಶನಗಳನ್ನು ಹಂಚಿಕೆ ಮಾಡುವ ಸಲುವಾಗಿ ಅರ್ಜಿಗಳನ್ನು ಪಡೆಯಲು ನಿಗದಿಗೊಳಿದ್ದ ದಿನ ಇಂದಿಗೆ ಅಂತ್ಯವಾಗಬೇಕಿತ್ತು. ಆದರೆ ಕಳೆದೊಂದು ತಿಂಗಳ ಅವಧಿಯಲ್ಲಿ ಸಾಲು ಸಾಲು ಹಬ್ಬಗಳ ಜೊತೆಗೆ ಹೆಚ್ಚು ಸರ್ಕಾರಿ ರಜೆಗಳು ಬಂದಿದೆ. ಹೀಗಾಗಿ ವಿವಿಧ ಸಂಘ ಸಂಸ್ಥೆಗಳು ಸಿಎ ನಿವೇಶನಕ್ಕಾಗಿ ಅರ್ಜಿಗಳನ್ನು ಪಡೆಯಲು ನವೆಂಬರ್ 6 ವರೆಗೂ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಪಡೆದಿರುವ ಅರ್ಜಿಗಳನ್ನು ಮುಡಾಗೆ ಸಲ್ಲಿಸಲು ಅಕ್ಟೋಬರ್ 30ರವೆಗೆ ಸಮಯ ನಿಗಧಿ ಪಡಿಸಲಾಗಿತ್ತು ಎಂದರು.

ಈಗ ನವೆಂಬರ್ 30 ರವರೆಗೂ ಭರ್ತಿ ಮಾಡಿದ ಅರ್ಜಿಗಳನ್ನು ಪ್ರಾರಂಭಿಕ ಠೇವಣಿ ಮತ್ತು ನೋಂದಣಿ ಶುಲ್ಕದೊಂದಿಗೆ ಸ್ವೀಕರಿಸಲಾಗುತ್ತದೆ. ಈ ಬಾರಿ ಒಂದೇ ಅರ್ಜಿಯಲ್ಲಿ ಮೂರು ಸಿಎ ನಿವೇಶನಗಳಿಗೆ ಆದ್ಯತೆ ಮೇರೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮುಡಾ ಅಧ್ಯಕ್ಷ ಹೆಚ್ ವಿ ರಾಜೀವ್ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button