Uncategorized

ಬೆಳಗಾವಿಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದಲ್ಲಿ ಪ್ರತಿಭಟನೆ: ಲತಿಫ್​​ ಖಾನ್ ಪಠಾಣ

ಬೆಳಗಾವಿ: ಕಳೆದ ಸೆಪ್ಟೆಂಬರ್ 29 ರಂದು ರೈಲ್ವೆ ಹಳಿ ಮೇಲೆ ಕೊಲೆಯಾಗಿ ದೊರೆತಿದ್ದ ಖಾನಾಪುರ ಯುವಕ ಅರ್ಬಾಜ್ ಮುಲ್ಲಾ ಬರ್ಬರ ಹತ್ಯೇ ಕೇಸ್‍ನ್ನು ಸತ್ಯಾಂಶವನ್ನು ಬುಧವಾರದ ಒಳಗೆ ಜನರ ಮುಂದೆ ಇಡುವ ಕೆಲಸ ಮಾಡಬೇಕು. ಇಲ್ಲದಿದ್ರೆ ಬರುವ ಶುಕ್ರವಾರ ಬೆಳಗಾವಿ ಮತ್ತು ಖಾನಾಪುರ ಬಂದ್ ಮಾಡಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಂಐಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಲತಿಫ​ಖಾನ್ ಪಠಾಣ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲತಿಫಖಾನ್ ಪಠಾಣ ಸೆ.28ರಂದು ಖಾನಾಪುರದಲ್ಲಿ ನಡೆದಿದ್ದ ಅರ್ಬಾಜ್ ಮುಲ್ಲಾ ಎಂಬ ಯುವಕನ ಹತ್ಯೆ ಪ್ರಕರಣವನ್ನು ತಿರುಚುವ ಯತ್ನ ನಡೆಯುತ್ತಿದೆ. ಹೀಗಾಗಿ ಈ ವಿಚಾರವನ್ನು ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಕರ್ನಾಟಕ ಉಸ್ತುವಾರಿ ಮಹ್ಮದ್ ಸಲೀಂ ಅವರ ಗಮನಕ್ಕೆ ತಂದ ನಂತರ ಹುಬ್ಬಳ್ಳಿ ರೈಲ್ವೇ ಡಿಎಸ್‍ಪಿ ಪುಷ್ಪಲತಾ ಅವರನ್ನು ಭೇಟಿಯಾಗಿ ಬಂದಿದ್ದೇವೆ.

ಪ್ರಾಮಾಣಿಕವಾಗಿ ತನಿಖೆ ಪೂರ್ಣಗೊಳಿಸಿ ಮಂಗಳವಾರ ಅಥವಾ ಬುಧವಾರ, ಇದು ಆತ್ಮಹತ್ಯೆಯೋ..? ಕೊಲೆಯೋ..? ಎಂಬ ಬಗ್ಗೆ ತಿಳಿಸುತ್ತೇವೆ ಎಂದಿದ್ದಾರೆ. ಬುಧವಾರ ಸತ್ಯಾಂಶ ಹೊರಗೆ ಬರದಿದ್ದರೆ ಎಂಐಎಂ ಪಕ್ಷದಿಂದ ಶುಕ್ರವಾರ ಉಗ್ರ ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಪ್ರತಿಭಟನೆ ಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಆಗಮಿಸಲಿದ್ದಾರೆ ಎಂದು ಹೇಳಿದರು.

ಇನ್ನು ಅರ್ಬಾಜ್ ಕೊಲೆ ಪ್ರಕರಣ ದೇಶಾದ್ಯಂತ ಚರ್ಚೆಯಲ್ಲಿ ಇದ್ದರು ಕೂಡ ಸ್ಥಳೀಯ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ವಕ್ತಾರೆ ಲಕ್ಷ್ಮಿ ಹೆಬ್ಬಾಳ್ಕರ್ ಸದ್ದಿಲ್ಲದೆ ಗೂಡು ಸೇರಿಕೊಂಡಿದ್ದಾರೆ, ತಮ್ಮ ಮೇಲಿನ ವೈಯಕ್ತಿಕ ಆರೋಪಿಗಳಿಗೆ ರೋಡಿಗಿಳಿಯುವ ನಾಯಕರು ತಮ್ಮ ವೋಟ್ ಬ್ಯಾಂಕ್ ಸಮುದಾಯದ ಯುವಕನ ಕಗ್ಗೊಲೆ ಆದ್ರೂ ಸುಮ್ಮನಿರುವುದು ಆಶ್ಚರ್ಯ ಕ್ಕೆ ಕಾರಣವಾಗಿದೆ.

Related Articles

Back to top button