Uncategorized

ಕಾರಿಗೆ ಟಿಪ್ಪರ್ ಡಿಕ್ಕಿ; ರಸ್ತೆ ತುಂಬಾ ಹರಡಿದ್ದ ಕಲ್ಲುಗಳಿಂದ ಕೆಲಕಾಲ‌ ಸಂಚಾರ ಅಸ್ತವ್ಯಸ್ತ

ಮಡಿಕೇರಿ : ಮಡಿಕೇರಿಯಿಂದ ಕುಶಾಲನಗರ ತೆರಳುವ ಮಾರ್ಗದಲ್ಲಿ ಕೆದಕಲ್‌ ರಸ್ತೆ ಬಳಿ ಟಿಪ್ಪರ್‌ ಲಾರಿ ಕಾರಿಗೆ ಡಿಕ್ಕಿ ಹೊಡೆದು ಲಾರಿ ಮಗುಚಿ ಬಿದ್ದು ಅಪಘಾತ ಸಂಬವಿಸಿತ್ತು.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಗ್ರಾಮದ ಕೆದಕಲ್ ಬಳಿ ಘಟನೆ. ಕುಶಾಲನಗರದಿಂದ ಮಡಿಕೇರಿ ಕಡೆ ತೆರಳುತ್ತಿದ್ದ ಕಲ್ಲು ತುಂಬಿದ್ದ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದು ಲಾರಿ ಮಗುಚಿ ಬಿದ್ದು ರಸ್ತೆ ಅಪಘಾತ‌ ನಡೆದಿದೆ.

ಚಾಲಕ ಸೇರಿ ಇಬ್ಬರಿಗೆ ಸಣ್ಣ ಪುಟ್ಟ ಗಾಯ. ಲಾರಿ ಮಗುಚಿದ ಹಿನ್ನೆಲೆ ರಸ್ತೆಯ ತುಂಬೆಲ್ಲಾ ಕಲ್ಲುಗಳು ಬಿದ್ದು ವಾಹನ ಸಂಚಾರ ಅಸ್ತವ್ಯಸ್ತ ಆಗಿತ್ತು. ಈ ಘಟನೆಯಿಂದಾಗಿ ಮೈಸೂರು ರಸ್ತೆಯಲ್ಲಿ ಕೆಲಕಾಲ ಸಂಚಾರ ಕಡಿತವಾಗಿ ವಾಹನ ದಟ್ಟಣೆ ಎದುರಾಗಿತ್ತು. ಸುಂಟಿಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣವು ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button