Uncategorized

ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ವಿಚಿತ್ರ ಮಗು ಜನನ

ಕಾರವಾರ : ಭಟ್ಕಳ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ತಲೆಯನ್ನು ಹೋಲುವ ವಿಚಿತ್ರ ಮಗುವಿನ ಜನನವಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದೆ.

ಅಂಕೋಲಾದ ಹೊನ್ನಿಕೇರಿ ಮೂಲದ ದಂಪತಿಗೆ ಈ ಮಗು ಜನಿಸಿದೆ.ಹೆರಿಗೆಗೂ ಮುನ್ನ ಭಟ್ಕಳದಲ್ಲಿ ಸ್ಕ್ಯಾನಿಂಗ್​ ಮಾಡಿದಾಗ ಮಗು 2 ತಲೆ ಹೋಲುವುದನ್ನು ಕಂಡು ವೈದ್ಯರಿಗೆ ಅಚ್ಚರಿಯಾಗಿತ್ತು.

ಮಹಿಳೆ ಸುಮಾರು 8 ತಿಂಗಳವರೆಗೆ ಕುಮಟಾದ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು. ಕೊನೆ ಗಳಿಗೆಯಲ್ಲಿ ವೈದ್ಯರು ಕೈಚೆಲ್ಲಿದಾಗ ಗರ್ಭಿಣಿ ಮಣಿಪಾಲ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿಯೂ ವೈದ್ಯರು ಮಗು ಬದುಕುವ ಯಾವುದೇ ಲಕ್ಷಣ ಕಾಣಿಸುವುದಿಲ್ಲ. ಇಲ್ಲಿ ಚಿಕಿತ್ಸೆ ವೆಚ್ಚವೂ ಹೆಚ್ಚಾಗಬಹುದು ಎಂದಿದ್ದರಂತೆ. ಈ ಕಾರಣದಿಂದಾಗಿ ಮಹಿಳೆ ಭಟ್ಕಳ ಸರ್ಕಾರಿ ಅಸ್ಪತ್ರೆಗೆ ದಾಖಲಾಗಿದ್ದರು.

ಭಟ್ಕಳದ ಹೆರಿಗೆ ತಜ್ಞೆ ಡಾ.ಶಂಸನೂರು ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಈ ಪ್ರಕರಣವನ್ನು ತಮ್ಮೆಲ್ಲ ಅನುಭವದಿಂದ ಸಹಜ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಕ್ಷೇಮವಾಗಿದ್ದು,ಮಗು ಜೀವಂತವಾಗಿದ್ದರೂ ಬದುಕುವ ಲಕ್ಷಣ ಕಡಿಮೆ ಎಂದು ವೈದ್ಯಾಧಿಕಾರಿ ಡಾ.ಸವಿತಾ ಕಾಮತ್​ ತಿಳಿಸಿದ್ದಾರೆ.

Related Articles

Leave a Reply

Your email address will not be published.

Back to top button