Uncategorized

ವಧು-ವರರಿಗೆ ಉಡುಗೊರೆಯಾಗಿ ಪೆಟ್ರೋಲ್ ಕೊಟ್ಟರು!

ಚಿಕ್ಕಮಗಳೂರು: ವಧು-ವರರಿಗೆ ಶುಭಾಶಯ ಕೋರಲು ಬಂಧು-ಬಳಗದವರು ವಿವಿಧ ರೀತಿಯ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಆದರೆ ಇಲ್ಲೊಂದು ವಿವಾಹದಲ್ಲಿ ವಧು-ವರರಿಗೆ ತಮ್ಮ ಸ್ನೇಹಿತರು ಪೆಟ್ರೋಲ್ ತುಂಬಿದ ಬಾಟಲಿಗಳನ್ನು ಉಡುಗೊರೆಯಾಗಿ ಕೊಟ್ಟಿರುವುದು ಅಚ್ಚರಿ ಉಂಟುಮಾಡಿದೆ. ನೆರೆದವರು ಒಂದು ಕ್ಷಣ ಶಾಕ್ ಆಗಿದ್ದಾರೆ.

ಸಚಿನ್ ಮರ್ಕಲ್ ಹಾಗೂ ವೈಷ್ಣವಿ ಅವರ ವಿವಾಹ ಮಹೋತ್ಸವ ಮೂಡಿಗೆರೆಯಲ್ಲಿ ನಡೆಯುತ್ತಿತ್ತು. ಈ ವೇಳೆ ಜೋಡಿಗೆ ಯಾವ ಉಡುಗೊರೆ ಕೊಡಬೇಕೆಂದು ಯೋಚಿಸಿದ ಕೆಲ ಸ್ನೇಹಿತರಿಗೆ ಸದ್ಯದ ಪರಿಸ್ಥಿತಿಯಲ್ಲಿ ಪೆಟ್ರೋಲ್ ತೈಲಕ್ಕೆ ಹೆಚ್ಚು ಮೌಲ್ಯವಿರುವುದು ಹೊಳೆದಿದೆ! ಹೀಗಾಗಿ ಮೂರು ಲೀಟರ್ ಪೆಟ್ರೋಲ್ ಖರೀದಿಸಿ ಬಾಟಲ್ಗಳಲ್ಲಿ ತುಂಬಿ ವಧು-ವರರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಪೆಟ್ರೋಲ್ ಉಡುಗೊರೆ ನೀಡುವ ಮೂಲಕ ಗಗನಕ್ಕೇರಿದ ಪೆಟ್ರೋಲ್ ದರದ ವಿರುದ್ಧ ಪ್ರತಿಭಟನೆಯ ರೀತಿಯಲ್ಲಿ, ಜನರ ಹಾಗೂ ಸರ್ಕಾರದ ಗಮನ ಸೆಳೆಯುವ ಯತ್ನವೂ ಇದಾಗಿದೆ.

Related Articles

Leave a Reply

Your email address will not be published. Required fields are marked *

Back to top button