ಕರವೇ ಕಾರ್ಯಕರ್ತರಿಂದ ಮಾನಸಿಕ ಅಸ್ವಸ್ಥತೆಯ ರಕ್ಷಣೆ : ಆಟೋರಾಜ ಫೌಂಡೇಶನ್ ವತಿಯಿಂದ ಚಿಕಿತ್ಸೆ
ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮ ಪಂಚಾಯಿತಿಗೆ ಸೇರಿದ ಕೆಳಗೆ ಕಾಗಡಿಕಟ್ಟೆಯಲ್ಲಿ ಸುಮಾರು 60 ವರ್ಷದ ಅನಾಥ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ತಿರುಗಾಡುತ್ತಾ ಮೈಮೇಲೆ ಪ್ರಜ್ಞೆ ಇಲ್ಲದ ರೀತಿಯಲ್ಲಿ ತಿರುಗಾಡುತ್ತಿದ್ದರು. ಇದರಿಂದ ಈ ಭಾಗದ ಸಾರ್ವಜನಿಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದರು.
ಕಾಗಡಿಕಟ್ಟೆ ಗ್ರಾಮಸ್ಥರಿಂದ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಪ್ರಾನ್ಸಿಸ್ ಡಿಸೋಜ ಅವರಿಗೆ ಪೋನ್ ಮೂಲಕ ಸಂಪರ್ಕಿಸಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಆಶ್ರಮಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸಬೇಕೆಂದು ಮನವಿ ಮಾಡಲಾಗಿದೆ.
ಕೂಡಲೇ ಮನವಿಗೆ ಸ್ಪಂದಿಸಿದ ಕರವೇ ಕಾರ್ಯಕರ್ತರು ದೊಡ್ಡಮಳ್ತೆ ಗ್ರಾಮ ಪಂಚಾಯತಿಗೆ ತಿಳಿಸಿ ಪಂಚಾಯತಿ ಮತ್ತು ಪೊಲೀಸ್ ಠಾಣೆತಿಂದ ಅಸ್ವಸ್ಥ ಅವಶ್ಯ ದಾಖಲೆ ಪಡೆದು ಕರವೇ ಕಾರ್ಯಕರ್ತರು ಮಡಿಕೇರಿಗೆ ಖುದ್ದಾಗಿ ತೆರಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಎಲ್ಲಾ ದಾಖಲೆಗಳನ್ನು ಕೊಟ್ಟು ಕೊಟ್ಟು ಅಗತ್ಯ ಸಹಾಯ ಮಾಡುವಂತೆ ವಿನಂತಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರ ಆದೇಶದಂತೆ ಮಾನಸಿಕ ಅಸ್ವಸ್ಥ ಮಹಿಳೆಯ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ನಂತರ ಇಂದು ಬೆಳಿಗ್ಗೆ 7 ಗಂಟೆಗೆ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಶಿವಕುಮಾರ್ ರವರು ಮತ್ತು ತಂಡ ಆಂಬ್ಯುಲೆನ್ಸ್ ನಲ್ಲಿ ಆಗಮಿಸಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಬೆಂಗಳೂರು ಆಟೋ ರಾಜ ಫೌಂಡೇಶನ್ ಗೆ ಸೇರಿಸಲು ಯಶಸ್ವಿಯಾದರು .