Uncategorized

ಶಿರಸಿಯಲ್ಲಿ ಮಹಿಳೆಯ ಚಿನ್ನದ ಸರ ಎಗರಿಸಿದ ಕಳ್ಳರು

ಕಾರವಾರ : ನಡೆದುಕೊಂಡು ಹೋಗುತ್ತಿದ್ದ ಒಂಟಿ ಮಹಿಳೆಯ ಬಳಿ ದಾರಿ ಕೇಳುವ ನೆಪದಲ್ಲಿ ಬಂಗಾರದ ಸರ ದೋಚಿ ಪರಾರಿಯಾದ ಘಟನೆ ಬುಧವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಭತ್ತದ ಓಣಿಯಲ್ಲಿ ನಡೆದಿದೆ.

ಬಿಳಿ ಕಾರಿನಲ್ಲಿ ಬಂದ ದರೋಡೆಕೋರರಿಂದ ಈ ಕೃತ್ಯ ನಡೆದಿದ್ದು,ಉಷಾ ದಾಮೋದರ ಪೈ ಎಂಬುವವರೇ ಬಂಗಾರದ ಸರ ಕಳೆದುಕೊಂಡವರಾಗಿದ್ದಾರೆ. ಆರೋಪಿಗಳು ಕುಮಟಾಕ್ಕೆ ಹೋಗುವ ಮಾರ್ಗದ ಕುರಿತು ಕಾರು ನಿಲ್ಲಿಸಿ ಮಹಿಳೆ ಬಳಿ ಕೇಳಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸರ ಹರಿದು ಪರಾರಿಯಾಗಿದ್ದಾರೆ.

ಅಂದಾಜು ಮೌಲ್ಯ 1.10,000 ರೂ.ಗಳ ಬಂಗಾರದ ಸರ ಇದಾಗಿದ್ದು,ಸಿ.ಪಿ.ಐ. ರಾಮಚಂದ್ರ ನಾಯಕ ನೇತೃತ್ವದಲ್ಲಿ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಘಟನೆ ಸಂಬಂಧ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button