Uncategorized

Duplicate Fertilizer: ನಕಲಿ ಗೊಬ್ಬರ ತಯಾರಿಕೆ: 85 ಚೀಲ ಗೊಬ್ಬರ ಜಪ್ತಿ

ಮೈಸೂರು : ನಕಲಿ ಗೊಬ್ಬರ ತಯಾರಿಸಿ ರೈಸ್ ಮಿಲ್‌ನಲ್ಲಿ ದಾಸ್ತಾನು ಮಾಡಿದ್ದ 85 ಮೂಟೆ ನಕಲಿ ಗೊಬ್ಬರವನ್ನು ತಹಶೀಲ್ದಾರ್ ಸಂತೋಷ್ ನೇತೃತ್ವದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಜಪ್ತಿ ಮಾಡಿದ್ದಾರೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಹರಂಬಳ್ಳಿ ಗ್ರಾಮದ ಹೇಮಾವತಿ ರೈಸ್ ಮಿಲ್‌ನಲ್ಲಿ ಈ ನಕಲಿ ಗೊಬ್ಬರ ಮಾರಾಟ ಪ್ರಕರಣ ಪತ್ತೆಯಾಗಿದೆ. ಪೋಟಾಷಿಯಂ, ಎಂಒಪಿ, ಉಪ್ಪು, ಡಿಎಪಿ ಇತ್ಯಾದಿ ಗೊಬ್ಬರಗಳ ಮಾದರಿಯಲ್ಲಿ ನಕಲಿ ಗೊಬ್ಬರ, ಮಣ್ಣು, ಕೆರೆಯ ಗೋಡು ಮಣ್ಣಿಗೆ ರೆಡ್ ಆಕ್ಸೈಡ್​ ಬಣ್ಣ ಬೆರೆಸಿ ನಕಲಿ ಗೊಬ್ಬರ ಸಿದ್ಧಪಡಿಸಲಾಗಿತ್ತು.

85 ಮೂಟೆ ನಕಲಿ ಗೊಬ್ಬರ ವಶಕ್ಕೆ ತೆಗೆದುಕೊಂಡು ನಕಲಿ ಗೊಬ್ಬರ ಇಲಾಖಾ ಪರೀಕ್ಷೆಗೆ ರವಾನೆ ಮಾಡಲಾಗಿದೆ. ವರದಿ‌ ಬಂದ ನಂತರ ಪ್ರಕರಣ ದಾಖಲಿಕೊಳ್ಳಲು ತಹಶೀಲ್ದಾರ್ ನಿರ್ಧಾರ ಮಾಡಿದ್ದಾರೆ.

ಕೆಲ ದಿನಗಳಿಂದ ಗೊಬ್ಬರದ ಅಭಾವ ಹೆಚ್ಚಾಗಿದೆ. ಎಲ್ಲೆಡೆಯೂ ಗೊಬ್ಬರ ಸಿಗುತ್ತಿಲ್ಲಾ ಆದ್ದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ನಕಲಿ ಗೊಬ್ಬರ ತಯಾರಿಸಿದ್ದಾರೆ. ಮೇಲ್ನೋಟಕ್ಕೆ ನಕಲಿ ಗೊಬ್ಬರದಂತೆ ಕಾಣುತ್ತಿದ್ದು, ವರದಿ ಬಂದ ಬಳಿಕ ನಕಲಿಯೋ ಅಥವಾ ಅಸಲಿಯೋ ಎಂಬುದು ಗೊತ್ತಾಗಲಿದೆ.

Related Articles

Leave a Reply

Your email address will not be published.

Back to top button