Uncategorized

ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗುವವರೆ ಹೆಚ್ಚು: ರಾಮನಗರ ಜಿಲ್ಲೆಯಲ್ಲಿ 622 ಮಂದಿ ಸಾವಿಗೆ ಶರಣು

ವರದಿ: ರಾಜೇಶ್ ಕೆ ಎನ್​​

ರಾಮನಗರ: ಜಿಲ್ಲೆಯಲ್ಲಿ ಮಾನಸಿಕ ಖಿನ್ನತೆಗೊಳಗಾಗಿರುವ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಸಮರ್ಪಕವಾಗಿ ಚಿಕಿತ್ಸೆ ದೊರೆಯುತ್ತಿದ್ದರೂ, ಆತ್ಮಹತ್ಯೆಗೆ ಶರಣಾಗುತ್ತಿರುವವರ ಸಂಖ್ಯೆಯು ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ ಬರೊಬ್ಬರಿ622 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಲ್ಲಿ ಶೇ.70 ರಿಂದ 80 ರಷ್ಟು ಮಂದಿ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪೋಷಕರು ಬೈದರು, ಗಾಡಿ ಕೊಡಿಸಲಿಲ್ಲ. ಗಂಡ-ಹೆಂಡತಿ ನಡುವಿನ ಜಗಳ, ಕೌಟುಂಬಿಕ ಕಲಹ, ಉದ್ಯೋಗ ಕಳೆದುಕೊಳ್ಳುವುದು, ಆರ್ಥಿಕ ಸಮಸ್ಯೆ, ಪ್ರೇಮ ವೈಫಲ್ಯ… ಹೀಗೆ ಸಣ್ಣಪುಟ್ಟ ಕಾರಣಗಳಿಗು ಆತ್ಮಹತ್ಯೆ ಮಾಡಿಕೊಂಡಿರುವವರು ಇದ್ದಾರೆ.

ಮಾನಸಿಕ ಆರೋಗ್ಯ ಹಾಗು ಮನೋಚೈತನ್ಯ ಶಿಬಿರಗಳಲ್ಲಿ ಈ ವರೆಗು ೧೫೫೦ ಮಂದಿ ಚಿಕಿತ್ಸೆ ಪಡೆದಿದ್ದಾರೆ. 2019 ರಲ್ಲಿ 208, 2020ರಲ್ಲಿ 243 ಹಾಗು 2021 ರಲ್ಲಿ 171 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ವರ್ಷದಲ್ಲಿ ಮೇಲಿಂದ ಬಿದ್ದು 48 ಮಂದಿ ಸಾವನ್ನಪ್ಪಿದ್ದರೆ, ವಿಷ ಸೇವಿಸಿ 195 ಮಂದಿ ಮೃತ ಪಟ್ಟಿದ್ದಾರೆ. ಬೆಂಕಿ ಹಂಚಿಕೊಂಡು 19 ಹಾಗು ನೇಣುಬಿಗಿದುಕೊಂಡು 360 ಮಂದಿ ಕೊನೆ ಉಸಿರೆಳಿದಿದ್ದಾರೆ.

ಖಿನ್ನತೆಯು ಹೆಚ್ಚು:

ಆತ್ಮಹತ್ಯೆಗೆ ಶರಣಾಗಿರುವವರಲ್ಲಿ ಬಹುತೇಕರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನುವುದು ಮಲ್ನೊಟಕ್ಕೆ ಕಾಣುತ್ತಿದೆ. ಮಾರ್ಯದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಹೊರತು ಪಡಿಸಿದರೆ, ಇನ್ನುಳಿದ ಎಲ್ಲ ಆತ್ಮಹತ್ಯೆ ಪ್ರಕರಣಗಳು ಸಹ ಮಾನಸಿಕವಾಗಿ ಖಿನ್ನತೆಗೊಳಗಾಗಿಯೇ ನಡೆದಿವೆ ಎನ್ನಬಹುದು. ೧೫ ದಿನದ ಹಿಂದೆ ಕಬ್ಬಾಳು ಬೆಟ್ಟದಿಂದ ಬಿದ್ದು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ನಟಿ ಸೌಜನ್ಯ ಸಹ ಆತ್ಮಹತ್ಯೆಗು ಮುನ್ನ ಡೆತ್ ನೋಟ್ ಬರೆದಿಟ್ಟಿದ್ದರು. ಇವರೆಲ್ಲರೂ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದವರೆ ಆಗಿದ್ದಾರೆ.
ಯಾವುದೇ ಆತ್ಮಹತ್ಯೆಯ ಕಾರಣದ ಹಿಂದೆ ಖಿನ್ನತೆಯೇ ಕಾರಣ. ಈ ಪ್ರಪಂಚವೇ ಬೇಡ ಎನ್ನುವಷ್ಟರ ಮಟ್ಟಿಗೆ ಖಿನ್ನತೆಗೆ ಒಳಗಾಗಿರುತ್ತಾರೆ ಎನ್ನುವುದನ್ನು ಪೊಲೀಸ್ ವರದಿಗಳೇ ಬಹಿರಂಗ ಪಡಿಸಿವೆ. ಆದರೆ, ಈ ರೀತಿ ಆತ್ಮಹತ್ಯೆ ಬಗ್ಗೆ ಆಲೋಚಿಸಿದ ಕೂಡಲೇ ಕೌನ್ಸಿಲ್ ಮಾಡಿಸಿಕೊಂಡರೆ ಇಂತಹ ಅನೇಕ ಜೀವಗಳು ಉಳಿಯಲಿವೆ ಎನ್ನುತ್ತಾರೆ ವೈದ್ಯರು.

ಇಲ್ಲಿ ಚಿಕಿತ್ಸೆ ಉಂಟು:

ಮಾನಸಿಕ ಖಿನ್ನತೆ, ಮಾನಸಿಕ ಆರೋಗ್ಯ ಮತ್ತು ಮನೋಚೈತನ್ಯ ಶಿಬಿರಗಳ ಮೂಲಕ ಸರಕಾರವೇ ಉಚಿತ ಚಿಕಿತ್ಸೆ ನೀಡಲಿದೆ. ತಿಂಗಳ ಮೊದಲ ಮಂಗಳವಾರ ಕನಕಪುರದ ಸಾರ್ವಜನಿಕ ಆಸ್ಪತ್ರೆ, ಎರಡನೇ ಮಂಗಳವಾರ ಸಾತನೂರಿನ ಸಮುದಾಯ ಆರೋಗ್ಯ ಕೇಂದ್ರ, ಮೂರನೇ ಮಂಗಳವಾರ ಮಾಗಡಿಯ ಸಾರ್ವಜನಿಕ ಆಸ್ಪತ್ರೆ, ಸೋಲೂರಿನ ಸಮುದಾಯ ಆರೋಗ್ಯ ಕೇಂದ್ರ ಹಾಗು ನಾಲ್ಕನೆ ಮಂಗಳವಾರ ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಲಿದೆ.

ಮೊದಲನೇ ಶುಕ್ರವಾರ ಹಾರೋಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರ, ಎರಡನೇ ಶುಕ್ರವಾರ ಕೋಡಿಹಳ್ಳಿ ಮತ್ತು ದೊಡ್ಡಾಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗು ನಾಲ್ಕನೆ ಶುಕ್ರವಾರ ಬಿಡದಿಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಡೆಯಲಿರುವ ಮಾನಸಿಕ ಆರೋಗ್ಯ ಶಿಬಿರಗಳಲ್ಲಿಯು ಚಿಕಿತ್ಸೆ ದೊರೆಯಲಿದೆ.

ಜಿಲ್ಲೆಯಲ್ಲಿ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ. ಸಣ್ಣಪುಟ್ಟ ವಿಷಯಗಳಿಗು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಲ ವಿಚಾರಗಳನ್ನು ನಾವೇ ಬಗೆಹರಿಸುತ್ತೇವೆ. ನಮ್ಮ ಬಳಿಗೆ ಬಂದಿದ್ದರೆ ಎಷ್ಟೊ ಸಮಸ್ಯೆಗಳು ಬಗೆಹರಿಯುತ್ತಿದ್ದವು. ಅದನ್ನು ಬಿಟ್ಟು ಆತುರದ ನಿರ್ಧಾರಗಳಿಗೆ ಮಾನಸಿಕ ಖಿನ್ನತೆಯೇ ಕಾರಣವಾಗಿವೆ. ಆತ್ಮಹತ್ಯೆಗು ಮುನ್ನ ಸ್ವಲ್ಪ ಯೋಚಿಸಿ, ಕೌನ್ಸಿಲಿಗ್ ಮಾಡಿಸಿಕೊಂಡರೆ ಸಾಕು. ಶಾಲೆಯಲ್ಲಿ ಮೇಸ್ಟ್ರು ಹೊಡೆದರು ಎಂಬ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಂಡ ಮಕ್ಕಳಿದ್ದಾರೆ ಎನ್ನುತ್ತಾರೆ ರಾಮನಗರ ಎಸ್ಪಿ ಎಸ್.ಗಿರೀಶ್.

ಮಾನಸಿಕ ಆರೋಗ್ಯ ಹಾಗು ಮನೋಚೈತನ್ಯ ಶಿಬಿರಗಳಲ್ಲಿ ಈ ವರೆಗು 1550 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಪ್ರತಿ ತಿಂಗಳು ಸಹ ಶಿಬಿರಗಳ ಮೂಲಕವು ಚಿಕಿತ್ಸೆ ನೀಡಲಾಗುತ್ತಿದೆ. ಸಣ್ಣಪುಟ್ಟ ವಿಚಾರಗಳಿಗೆ ಖಿನ್ನತೆಗೆ ಒಳಗಾಗಿರುವವರನ್ನು ನೋಡಿದ್ದೆನೆ. ಮೊಬೈಲ್ ಕೊಡಿಸಿಲ್ಲ ಎಂದು ಖಿನ್ನತೆಗೆ ಹೋಗಿರುವವರು ಇದ್ದಾರೆ. ತಮ್ಮ ಮಕ್ಕಳ ಮೇಲೆ ಪೋಷಕರು ನಿಗಾ ಇಡಬೇಕು ಎಂದಯ ಮಾಹಿತಿ ನೀಡುತ್ತಾರೆ ಮೆಂಟಲ್ ಹೆಲ್ತ್ ಆಫಿಸರ್ ಡಾ.ಮಂಜುನಾಥ್ ಅವರು.

Related Articles

Leave a Reply

Your email address will not be published. Required fields are marked *

Back to top button