Uncategorized

ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ಕೋಣಗಳು ವಶ

ಕಾರವಾರ : ಅಕ್ರಮವಾಗಿ ಕೋಣಗಳನ್ನು ಸಾಗಿಸಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ. ತಾಲೂಕಿನ ಕೋಡ್ಸಣಿ ಗ್ರಾಮದ ಬಳಿ ಲಾರಿಯಲ್ಲಿ ಅಕ್ರಮವಾಗಿ, ಹಿಂಸಾತ್ಮಕ ರೀತಿಯಲ್ಲಿ ಕೋಣಗಳನ್ನು ತುಂಬಿಕೊಂಡು ಮಂಗಳೂರಿನ ಕಡೆ ಸಾಗಿಸಲಾಗುತ್ತಿತ್ತು.

ಈ ವೇಳೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 2.25 ಲಕ್ಷ ರೂ.ಮೌಲ್ಯದ 17 ಕೋಣಗಳನ್ನ ರಕ್ಷಣೆ ಮಾಡಲಾಗಿದೆ.ಈ ವೇಳೆ ಅಕ್ರಮ ಜಾನುವಾರು ಸಾಗಾಟದಲ್ಲಿ ತೊಡಗಿದ್ದ ಆರೋಪಿಗಳಾದ ದಕ್ಷಿಣ ಕನ್ನಡದ ಬೆಳ್ತಂಗಡಿಯ ಹೈದರ್ ಬ್ಯಾರಿ, ಅಂಕೋಲಾದ ಬೊಮ್ಮಯ್ಯ ನಾಯಕ, ಹಾಸನದ ಮಂಜೇಗೌಡ ಹಾಗೂ ಕೇರಳದ ಕಾಸರಗೋಡು ಮೂಲದ ಅಬ್ದುಲ್ ರಿಯಾಸ್ ಎನ್ನುವವರನ್ನ ಬಂಧಿಸಲಾಗಿದೆ.

ಇನ್ನೋರ್ವ ಆರೋಪಿ ಕೇರಳ ಮೂಲದ ಅಬುಬಕ್ಕರ್ ದಿಲ್‌ಶಾದ್ ಎನ್ನುವವನು ಪರಾರಿಯಾಗಿದ್ದಾನೆ. ಇನ್ನು ಜಾನುವಾರು ಸಾಗಾಟಕ್ಕೆ ಬಳಸಿದ್ದ ಲಾರಿ ಹಾಗೂ ಕಾರು ಸೇರಿ ಸುಮಾರು 9 ಲಕ್ಷ ರೂ.ಮೌಲ್ಯದ ಸ್ವತ್ತುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದು,ಈ ಸಂಬಂಧ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಸಿಯ ಕಾಡಿನಲ್ಲಿ ದನ ಕಡಿಯುತ್ತಿದ್ದವನ ಬಂಧನ : ನಾಲ್ಕುಜನ ಪರಾರಿ

ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗೌಡಳ್ಳಿ ಗ್ರಾಮದ ಉರ್ದು ಶಾಲೆಯ ಹಿಂಭಾಗದ ಕಾಡಿನ ಜಾಗದಲ್ಲಿ ಅಕ್ರಮವಾಗಿ ಮಾಂಸಕ್ಕಾಗಿ ದನವನ್ನು ಕಡಿಯುತ್ತಿರುವ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಗೋವನ್ನು ಕಡಿಯುತಿದ್ದ ಆರೋಪಿ ನಜೀರ್ ಅಹಮದ್ ಎಂಬುವವನನ್ನು ಬಂಧಿಸಿದ್ದಾರೆ.

ಬಂಧಿತನಿಂದ ಮಾಂಸಕ್ಕಾಗಿ ಕಡಿಯಲು ಉಪಯೋಗಿಸಿದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದು, ಘಟನೆ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published.

Back to top button