ಇತರ ಕ್ರೀಡೆ

karisham sanil: ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದ ಉಡುಪಿಯ ಕರಿಷ್ಮಾ

ಉಡುಪಿ: ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಚಾಂಪಿಯನ್ ಶಿಪ್ ನಲ್ಲಿ ಉಡುಪಿ ಜಿಲ್ಲೆಯ ಕರಿಷ್ಮಾ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಪಂಜಾಬ್ ಮತ್ತು ರಾಜಸ್ಥಾನದ ಅಥ್ಲೆಟ್ ಗಳನ್ನು ಹಿಂದಿಕ್ಕಿ ಪದಕವನ್ನು ಗೆದ್ದಿದ್ದಾಳೆ.

ಬ್ರಹ್ಮಾವರ ತಾಲೂಕಿನ ಬಾರ್ಕೂರು ನಿವಾಸಿಯಾಗಿರುವ ಕರಿಷ್ಮಾ, ರಾಯಚೂರಿನ ಎಲ್ ವಿ ಡಿ ಕಾಲೇಜಿಲ್ಲಿ ಬಿಎಸ್ಸಿ ಅಂತಿಮ ವರ್ಷ ಪದವಿ ಕಲಿಯುತ್ತಿದ್ದಾರೆ. ಸುದರ್ಶನ್ ಅನಿಲ್ ಮತ್ತು ಇಂದಿರಾ ದಂಪತಿ ಪುತ್ರಿ ಕರಿಷ್ಮಾ, ಬ್ರಹ್ಮಾವರ ಬೋರ್ಡ್ ಸಂಸ್ಥೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾಳೆ.

ದೆಹಲಿ ಚಾಂಪಿಯನ್ ಶಿಪ್ ನಲ್ಲಿ ಕರಿಷ್ಮಾ ಸನಿಲ್ 46.52 ಮೀಟರ್ ದೂರಕ್ಕೆ ಜಾವಲ ಎಸೆದು ಸಾಧನೆ ಮಾಡಿದ್ದಾಳೆ. ಒಲಿಂಪಿಕ್ಸ್ ನಲ್ಲಿ ಚಿನ್ನದ ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರ ಟ್ರೈನರ್ ಕಾಶಿನಾಥ್ ನಾಯ್ಕ ಈಕೆಗೂ ಆನ್ ಲೈನ್ ನಲ್ಲಿ ತರಬೇತಿ ಕೊಡುತ್ತಿದ್ದಾರೆ. ಬಾರಾಳಿ ಹೈಸ್ಕೂಲ್ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದಾಳೆ.

ಕರ್ನಾಟಕದ ಕರಿಷ್ಮಾ, ಮುಂದೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಉತ್ಸಾಹ ತೋರಿದ್ದಾಳೆ. ದೇಶಕ್ಕೆ ಪದಕ ತಂದುಕೊಡುವ ನಿರೀಕ್ಷೆ ಹುಟ್ಟಿಸಿದ್ದಾಳೆ. ಅಥ್ಲೆಟಿಕ್ಸ್ ಗಾಗಿ ಸಂಪೂರ್ಣವಾಗಿ ಕರಿಷ್ಮಾ ಜೀವನವನ್ನು ಮುಡಿಪಾಗಿಟ್ಟಿದ್ದಾಳೆ. ಮುಂದೆ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸುವ ಎಲ್ಲ ನಿರೀಕ್ಷೆಗಳು ಇವೆ.

Related Articles

Leave a Reply

Your email address will not be published.

Back to top button