ಇತರ ಕ್ರೀಡೆ

Somanna Marriage: ವೈವಾಹಿಕ ಜೀವನಕ್ಕೆ ಪ್ರವೇಶಿಸಿದ ಅಂತರರಾಷ್ಟ್ರೀಯ ಹಾಕಿ ಆಟಗಾರ ಸೋಮಣ್ಣ

ಕೊಡಗು: ಅಂತರರಾಷ್ಟ್ರೀಯ ಹಾಕಿಪಟು, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಕರಿನೆರವಂಡ ಸೋಮಣ್ಣ ಅವರು ಶುಕ್ರವಾರ ವೈವಾಹಿಕ ಜೀವನಕ್ಕೆ ಪ್ರವೇಶಿಸಿದರು.

ವಿರಾಜಪೇಟೆಯ ಕೊಡವ ಸಮಾಜದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಗೋಣಿಕೊಪ್ಪಲಿನ ಚೇಮಿರ ಬೆಳ್ಯಪ್ಪ ಮತ್ತು ಗೀತಾ ದಂಪತಿಗಳ ಪುತ್ರಿ ನಮೃತ (ನೀತಿ) ಅವರನ್ನು ತಮ್ಮ ಕೊಡವ ಸಂಪ್ರದಾಯದಂತೆ ಬಾಳಸಂಗಾತಿಯಾಗಿ ಸ್ವೀಕರಿಸುವ ಮೂಲಕ ಸೋಮಣ್ಣ ಅವರು ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದರು.

ಹಾಕಿ ಕ್ರೀಡೆಯಲ್ಲಿ ತಮ್ಮ ವಿಭಿನ್ನ ಕೌಶಲ್ಯ ಮತ್ತು ಕೈಚಳಕದ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಯತ್ತ ಶರವೇಗದಲ್ಲಿ ಕೊಂಡೊಯ್ಯುವಲ್ಲಿ ಪ್ರಖ್ಯಾತಿ ಪಡೆದಿರುವ ಸೋಮಣ್ಣ ಅವರ ವಿವಾಹ ಕಾರ್ಯಕ್ರಮವನ್ನು ಸಾಕ್ಷೀಕರಿಸಲು ಅಂತರರಾಷ್ಟ್ರೀಯ ಖ್ಯಾತಿಯ ಹಾಕಿ ಪಟುಗಳು ಸೇರಿದಂತೆ ಹಾಕಿ ಆಟಗಾರರ ದಂಡೇ ವಿರಾಜಪೇಟೆಗೆ ಆಗಮಿಸಿತು.

ಸೋಮಣ್ಣ ಅವರ ವಿವಾಹ ಮಹೋತ್ಸವದಲ್ಲಿ ಒಲಂಪಿಯನ್ ಹಾಕಿ ಪಟುಗಳಾದ ವಿ. ಆರ್. ರಘುನಾಥ್, ಎಸ್.ವಿ. ಸುನಿಲ್, ಎಸ್.ಕೆ. ಉತ್ತಪ್ಪ, ನಿಕ್ಕಿನ್ ತಿಮ್ಮಯ್ಯ, ಭರತ್ ಚೆಟ್ರಿ, ಸಿ.ಎಸ್. ಪೂಣಚ್ಚ, ಅಂತರಾಷ್ಟ್ರೀಯ ಹಾಕಿ ಪಟುಗಳಾದ ವಿಕ್ರಂಕಾಂತ್, ನಿತಿನ್ ತಿಮ್ಮಯ್ಯ, ವಿ.ಎಸ್. ವಿನಯ್, ಪ್ರಧಾನ್ ಸೋಮಣ್ಣ, ಪಿ.ಎಲ್. ತಿಮ್ಮಣ್ಣ, ಎ.ಬಿ.ಚೀಯಣ್ಣ, ಕೆ.ಕೆ.ಪೂಣಚ್ಚ, ಬಿ. ಸಿ.ಪೂಣಚ್ಚ, ಪಿ. ಶಣ್ಮುಗಂ, ಎ.ಸಿ. ಕುಟ್ಟಪ್ಪ, ಆಭರಣ್ ಸುದೇವ್, ಬಿಪಿನ್ ತಿಮ್ಮಯ್ಯ, ಕೆ.ಪಿ.ರಾಯ್, ಕೆ.ಕೆ. ಭರತ್, ಜಗದೀಪ್ ದಯಾಳ್, ನಿಲನ್ ಪೂಣಚ್ಚ, ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಸೇರಿದಂತೆ ಕರ್ನಾಟಕದ ಹಾಕಿ ತಂಡದ ಹಲವು ಸದಸ್ಯರು, ಅಪಾರ ಸಂಖ್ಯೆಯ ಗೆಳೆಯರ ತಂಡ ಪಾಲ್ಗೊಂಡಿದ್ದರು

Related Articles

Leave a Reply

Your email address will not be published.

Back to top button