Latest

ಹಾಡುಹಗಲೇ ಬಸ್ ನಿಲ್ದಾಣದಲ್ಲಿ ಕಗ್ಗೋಲೆ ಪ್ರಕರಣ: ಆರು ಜನರ ಬಂಧನ

ಕಲಬುರ್ಗಿ: ಹಾಡುಹಗಲಲ್ಲೇ ಕೇಂದ್ರ ಬಸ್ ನಿಲ್ದಾಣದಲ್ಲಿ ರೌಡಿ ಅಭಿಷೇಕ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.

ಹತ್ಯೆಯ ಆರೋಪಿಗಳಾದ ಮುರ್ತುಜಾ ಮೊಹಮ್ಮದ್ ಅಲಿ (25), ಸಾಗರ ಭೈರಾಮಡಗಿ (22), ಆಕಾಶ ಜಾಧವ (22), ಶುಭಂ ದೊಡ್ಡಮನಿ (23), ಅಶೋಕ ಮೂಲಭಾರತಿ (21) ಹಾಗೂ ಕೌಶಿಕ್ ಹಳೆಮನಿ (21) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ನಾಲ್ಕು ಲಾಂಗ್, ಮಚ್ಚು, ಎರಡು ಬೈಕ್ ಹಾಗೂ ಒಂದು ಇನ್ನೋವಾ ಕಾರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಲೆಗೀಡಾದ ರೌಡಿ ಅಭಿಷೇಕ ತನ್ನ ಗ್ಯಾಂಗ್ ನೊಂದಿಗೆ ಒಂದುವರೆ ವರ್ಷದ ಹಿಂದೆ ಹಳೆ ಜೇವರ್ಗಿ ರಸ್ತೆಯ ಅಂಡರ್ ಬ್ರೀಡ್ಜ್ ಹತ್ತಿರ ಸಾಗರ ಭೈರಾಮಡಗಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಇದೇ ವೈಷಮ್ಯದಿಂದ ಸಾಗರ ಹಾಗೂ ಗ್ಯಾಂಗ್ ನವರು ಕಳೆದ 4 ರಂದು ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ರೌಡಿ ಅಭಿಷೇಕನನ್ನು ಹಾಡುಹಗಲೇ ಭಯಾನಕವಾಗಿ ಹತ್ಯೆ ಮಾಡಿದ್ದರು. ಕೊಲೆಯ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿ ಕಲಬುರಗಿ ಜನರನ್ನು ಬೆಚ್ಚಿ ಬೀಳಿಸಿತ್ತು.

ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು, ಈ ಕುರಿತು ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button