Latest

ಮರಣದಂಡನೆ ರದ್ದುಪಡಿಸಲು ವಿಶ್ವದೆಲ್ಲಡೆ ಅಭಿಯಾನ: ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್

ಪ್ಯಾರಿಸ್: ವಿಶ್ವದೆಲ್ಲಡೆ ಜಾರಿಯಲ್ಲಿರುವ ಮರಣದಂಡನೆ ಶಿಕ್ಷೆಯನ್ನು ರದ್ದುಪಡಿಸಲು ಪ್ರಾನ್ಸ್ ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಿದೆಯೆಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ತಿಳಿಸಿದ್ದಾರೆ.

ಫ್ರಾನ್ಸ್ ನಲ್ಲಿ ನಾಲ್ಕು ದಶಕಗಳ ಹಿಂದೆಯೇ ಮರಣದಂಡನೆ ರದ್ದಾಗಿದ್ದು, ಇದರ 40ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.

ಯುರೋಪ್ ಒಕ್ಕೂಟದ ಮುಂದಿನ ಅಧ್ಯಕ್ಷತೆಯನ್ನು ತಾವು ವಹಿಸಿಕೊಳ್ಳಲಿದ್ದು, ಇದರ ಭಾಗವಾಗಿ ಮರಣದಂಡನೆ ಜಾರಿಯಲ್ಲಿರುವ ಮತ್ತು ರದ್ದಾಗಿರುವ ದೇಶಗಳ ನಾಗರಿಕ ಸಮುದಾಯ ಸಂಘಟನೆಗಳ ಸಮಾವೇಶವನ್ನು ಪ್ಯಾರಿಸ್ ನಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published.

Back to top button