Latest

ಭವ್ಯ ಶತಕ ದಾಖಲಿಸಿದ ದಿವ್ಯ: ನಾಕೌಟ್ ಗೆ ಕರ್ನಾಟಕ

ನಾಗ್ಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಂಗಣದಲ್ಲಿ ನಡೆದ ಬಿಸಿಸಿಐ ಹಿರಿಯ ವನಿತೆಯರ ಏಕ ದಿನ ಕ್ರಿಕೆಟ್ ಚಾಂಪಿಯನ್ಷಿಪ್ ನಲ್ಲಿ ಬರೋಡ ವಿರುದ್ಧ 9 ವಿಕೆಟ್ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ತಂಡ ನಾಕೌಟ್ ಹಂತ ತಲುಪಿದೆ.

ಜಯ ಗಳಿಸಲು 215 ರನ್ ಗುರಿಹೊತ್ತ ಕರ್ನಾಟಕದ ಪರ ದಿವ್ಯಾ ದಿವ್ಯಗ್ನಾನಾನಂದ ಅಜೇಯ 123 ರನ್ ಸಿಡಿಸಿ ಜಯದ ರೂವಾರಿ ಎನಿಸಿದರು. 111 ಎಸೆತಗಳನ್ನು ಎದುರಿಸಿದ ದಿವ್ಯಾ ಅವರ ಇನ್ನಿಂಗ್ಸ್ ನಲ್ಲಿ 23 ಬೌಂಡರಿ ಮತ್ತು 1 ಸಿಕ್ಸರ್ ಸೇರಿತ್ತು. ವೃಂದಾ ದಿನೇಶ್ ಕೂಡ ಅಜೇಯ 69 ರನ್ ಸಿಡಿಸಿ ಸುಲಭ ಜಯಕ್ಕೆ ನೆರವಾದರು. ಇದಕ್ಕೂ ಮುನ್ನ ಕರ್ನಾಟಕದ ಬೌಲರ್ ಗಳಾದ ಚಂದು ವಿ. (47ಕ್ಕೆ 3), ಸಹನಾ ಪವಾರ್ (38ಕ್ಕೆ 2) ಮತ್ತು ಶ್ತೇಯಾಂಕ ಪಾಟಿಲ್ (30ಕ್ಕೆ 4) ಬರೋಡಾ ತಂಡದ ರನ್ ಗಳಿಕೆಗೆ ಕಡಿವಾಣ ಹಾಕಿದ್ದರು.

ಆಡಿದ ಐದು ಲೀಗ್ ಪಂದ್ಯಗಳಲ್ಲೂ ಜಯ ಗಳಿಸಿದ ಕರ್ನಾಟಕ ತಂಡ ನಾಕೌಟ್ ಗೆ ತೇರ್ಗಡೆಯಾಗಿದೆ. ಇದೇ ತಿಂಗಳ 13 ರಿಂದ ಬೆಂಗಳೂರಿನಲ್ಲಿ ಲೀಗ್ ಪಂದ್ಯಗಳು ನಡೆಯಲಿವೆ.

Related Articles

Leave a Reply

Your email address will not be published. Required fields are marked *

Back to top button