Latest

ಶಿರಸಿಯಲ್ಲಿ ಐದು ಕೋಟಿ ಮೌಲ್ಯದ ತಿಮಿಂಗಿಲ ವಾಂತಿ ವಶ : ಇಬ್ಬರ ಬಂಧನ

ಕಾರವಾರ : ಐದು ಕೋಟಿ ರೂಪಾಯಿ ಮೌಲ್ಯದ ನಿರ್ಬಂಧಿತ ತಿಮಿಂಗಿಲದ ವಾಂತಿ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.

ಡಿವೈಎಸ್ಪಿ ರವಿ ಡಿ.ನಾಯ್ಕರವರ ನೇತೃತ್ವದಲ್ಲಿ ಸಿಪಿಐ ರಾಮಚಂದ್ರ ನಾಯಕ, ಪಿ.ಎಸ್.ಐ ಭೀಮಾಶಂಕರ್, ಪಿ.ಎಸ್.ಐ ಈರಯ್ಯ ನೇತೃತ್ವದಲ್ಲಿ ದಾಳಿ ನಡೆದಿದ್ದು, ಐದು ಕೋಟಿ ಮೌಲ್ಯದ ಐದು ಕೇ.ಜಿ.ತಿಮಿಂಗಿಲದ ವಾಂತಿ (ಅಂಬೆ ಗ್ರೀಸ್) ಯನ್ನು ವಶಕ್ಕೆ ಪಡೆಯಲಾಗಿದೆ.

ಬೆಳಗಾವಿ ಮೂಲದ ಸಂತೋಷ್ ಕಾಮತ್,ಶಿರಸಿಯ ರಾಜೇಶ್ ಪೂಜಾರಿ ಬಂಧಿತ ಆರೋಪಿಗಳಾಗಿದ್ದು,ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ತಿಮಿಂಗಿಲ ವಾಂತಿ ?

ಸಮುದ್ರದಲ್ಲಿ ತಿಮಿಂಗಿಲವು ತಿಂದ ಆಹಾರವು ಜೀರ್ಣಿಸಿಕೊಳ್ಳಲಾಗದೇ ಮರಳಿ ಅವುಗಳನ್ನು ಹೊರಕಕ್ಕುತ್ತವೆ. ಹೀಗೆ ಹೊರಕಕ್ಕಿದ ಆಹಾರವು ದ್ರವರೂಪದಲ್ಲಿ ಗಟ್ಟಿಯಾಗಿರುತ್ತದೆ. ಇದಕ್ಕೆ ಅಂಬರ್ ಗ್ರೀಸ್ ಎಂದು ವೈಜ್ಞಾನಿಕವಾಗಿ ಕರೆಯಲಾಗುತ್ತದೆ. ಈ ದ್ರವರೂಪದ ಗಟ್ಟಿಯಾದ ವಸ್ತುವು ಮೊದಲು ಸಮುದ್ರದಾಳದಲ್ಲಿ ಇದ್ದು, ನಂತರ ಕೆಲವು ರಾಸಾಯನಿಕ ಕ್ರಿಯೆಯ ಮೂಲಕ ಸಮುದ್ರದಲ್ಲಿ ತೇಲುತ್ತವೆ.

ಹೀಗೆ ತೇಲಿದ ತಿಮಿಂಗಿಲದ ವಾಂತಿಯು ಅತೀ ಅಮೂಲ್ಯವಾಗಿದ್ದು, ಕೆಟ್ಟ ವಾಸನೆ ಇದ್ದರೂ ಸಹ ಇದು ಕೋಟಿಗಟ್ಟಲೆ ಬೆಲೆ ಬಾಳುತ್ತದೆ. ಅರಣ್ಯ ಕಾಯ್ದೆಯಡಿ ಈ ತಿಮಿಂಗಿಲದ ವಾಂತಿಯನ್ನು ಮಾರಾಟ ಮಾಡುವುದು ಭಾರತದಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ.

ಈ ತಿಮಿಂಗಿಲದ ವಾಂತಿ ಅಪರೂಪದ್ದಾಗಿದೆ.ಇವುಗಳನ್ನು ಹೊರದೇಶಗಳಲ್ಲಿ ಸುಗಂದ ದ್ರವ್ಯ ತಯಾರಿಸಲು ಬಳಸಲಾಗುತ್ತದೆ.ಇದರಿಂದ ತಯಾರಾದ ಸುಗಂಧ ದ್ರವ್ಯಕ್ಕೆ ಗಲ್ಛ್ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆ ಸಹ ಇದೆ. ಹಲವು ದೇಶಗಳಲ್ಲಿ ತಿಮಿಂಗಿಲದ ವಾಂತಿ ಮಾರಾಟಕ್ಕೆ ಅವಕಾಶಗಳಿವೆ. ಅತೀ ವಿರಳವಾಗಿ ಸಿಗುವುದರಿಂದ ಇವುಗಳಿಗೆ ಬೇಡಿಕೆ ಇದ್ದು, ಭಾರತದಲ್ಲಿ ನಿಷೇಧ ಇರುವುದರಿಂದ ಮುಂಬೈ ಮೂಲಕ ಇತರೆ ದೇಶಗಳಿಗೆ ಇವುಗಳನ್ನು ಕಳ್ಳ ಹಾದಿಯಲ್ಲಿ ಸಾಗಿಸಿ ಹಣ ಸಂಪಾದಿಸುತ್ತಾರೆ.

ಜಿಲ್ಲೆಯ ಮುರ್ಡೇಶ್ವರದಲ್ಲಿ ಒಂದು ಕೆಜಿ.ಗೂ ಹೆಚ್ಚು ಅಂಬರ್ ಗ್ರೀಸ್ ಇತ್ತೀಚೆಗೆ ದೊರಕಿತ್ತು. ಇದನ್ನು ಅರಣ್ಯ ಇಲಾಖೆ ವಶಕ್ಕೆ ನೀಡಲಾಗಿತ್ತು. ಆದರೆ ಇದೀಗ ಐದು ಕೆ.ಜಿ.ಯಷ್ಟು ತೂಕದ ತಿಮಿಂಗಿಲದ ವಾಂತಿ ದೊರೆತಿದ್ದು,ಇದೇ ಮೊದಲ ಸಲವಾಗಿದೆ.

Related Articles

Leave a Reply

Your email address will not be published. Required fields are marked *

Back to top button