Latest

ನಿತ್ಯ ಜೀವನದಲ್ಲಿ ಮಹರ್ಷಿ ವಾಲ್ಮೀಕಿ ಆದರ್ಶಗಳನ್ನು ಪಾಲಿಸೋಣ: ಸಚಿವ ಡಾ.ನಾರಾಯಣಗೌಡ

ಮಂಡ್ಯ: ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ನಮ್ಮ ನಿತ್ಯಜೀವನದಲ್ಲಿ ಪಾಲಿಸೋಣ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಹೇಳಿದರು.

ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಾಲ್ಮೀಕಿ ಭಾವಚಿತ್ರಕ್ಕೆ ಆರತಿ ಬೆಳಗಿ ಪುಷ್ಪನಮನ ಸಲ್ಲಿಸಿದರು.

ರಾಷ್ಟ್ರದಲ್ಲೇ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುತ್ತಿದೆ, ಮಂಡ್ಯದಲ್ಲೂ ಸಹ ಅರ್ಥಪೂರ್ಣವಾಗಿ ವಾಲ್ಮೀಕಿ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಆತ್ಮ ಪೂರಕವಾಗಿ ವಾಲ್ಮೀಕಿ ಅವರನ್ನ ನೆನೆಯುತ್ತೇನೆ. ಅವರು ರಾಮಾಯಣ ಬರೆಯುವ ಮೂಲಕ ಎಲ್ಲ ಜನರಿಗೆ ಶಕ್ತಿ ಕೊಟ್ಟಿದ್ದಾರೆ. ರಾಮಾಯಣ ಮಹಾಕಾವ್ಯ ಶ್ರೇಷ್ಠ, ಅಷ್ಟು ಮಾತ್ರವಲ್ಲದೇ ಅದನ್ನು ಬರೆದ ವ್ಯಕ್ತಿಯ ಬದುಕು ಸಹ ಶ್ರೇಷ್ಠ. ವಾಲ್ಮೀಕಿ ಅವರ ಆದರ್ಶಗಳು ನಮಗೆ ದಾರಿದೀಪವಾಗಲಿ ಎಂದು ಸಚಿವ ನಾರಾಯಣ ಗೌಡ ಅವರು ಹೇಳಿದರು.

ಯಾವ ವ್ಯಕ್ತಿ ಶ್ರಮಜೀವಿಯಾಗಿ ಹೊರಹೊಮ್ಮಿದ್ರೆ ಅವರಿಗೆ ಜೀವನದ ಬಗ್ಗೆ ಗೊತ್ತಿರುತ್ತದೆ. ಅದೇ ರೀತಿ ನಾಯಕ ಸಮುದಾಯದವರು ಮಹಾರಾಷ್ಟ್ರದಲ್ಲಿ ಇತರ ಸಮುದಾಯಕ್ಕೆ ಸಹಾಯ ಮಾಡುತ್ತಿದ್ದಾರೆ. ಆದ್ದರಿಂದ ನಾಯಕ ಸಮುದಾಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ನಾರಾಯಣ ಗೌಡ ಅವರು ತಿಳಿಸಿದರು.

ಈ ಸಮುದಾಯವನ್ನು ಉತ್ತಮ ಸ್ಥಾನಕ್ಕೆ ತರಲು ನಾನು ಪ್ರಯತ್ನಿಸುತ್ತೇನೆ, ನಿಮ್ಮ ಜೊತೆ ನಾವು ಸದಾ ಇರುತ್ತೇವೆ ಎಂದು ಸಚಿವ ನಾರಾಯಣಗೌಡ ಅವರು ಭರವಸೆ ನೀಡಿದರು.

ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಎಸ್‌ಎಸ್ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಟಿ ಶ್ರೀಕಂಠೇಗೌಡ, ನಗರ ಸಭಾ ಅಧ್ಯಕ್ಷರಾದ ಹೆಚ್ .ಎಸ್ ಮಂಜು, ಮುಡಾ ಅಧ್ಯಕ್ಷರಾದ ಶ್ರೀನಿವಾಸ್, ಜಿಲ್ಲಾಧಿಕಾರಿ ಎಸ್.ಅಶ್ವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button