Latest

ಕಾಸರಕೋಡಿನ ಇಕೋ ಬೀಚ್ ನಲ್ಲಿ ಅಪಾಯಕ್ಕೆ ಸಿಲುಕಿದ ಇಬ್ಬರು ಪ್ರವಾಸಿಗರ ರಕ್ಷಣೆ

ಕಾರವಾರ : ಅಲೆಗಳ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ಲೈಫ್​​ ಗಾರ್ಡಗಳು ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಇಕೋ ಬೀಚ್ ನಲ್ಲಿ ಇಂದು ನಡೆದಿದೆ.

ಮಂಜುಳಾ ಬಿರಾದಾರ್ (20) ಲಕ್ಷ್ಮಣ ಬಿರಾದಾರ್ (28) ರಕ್ಷಣೆಗೊಳಗಾದವರಾಗಿದ್ದಾರೆ.ಬಾಗಲಕೋಟೆ ಜಿಲ್ಲೆಯವರಾದ ಇವರು ಕುಟುಂಬ ಸಮೇತರಾಗಿ ಒಟ್ಟು ಹತ್ತು ಜನರು ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಇಕೋ ಬೀಚ್ ನಲ್ಲಿ ಸಮದ್ರದಲ್ಲಿ ಆಟವಾಡುತ್ತಿದ್ದು, ಅಲೆಗೆ ಈಜಲಾಗದೇ ಮುಳುಗಿದ್ದರು.

ತಕ್ಷಣದಲ್ಲಿ ಇವರ ರಕ್ಷಣೆ ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಇಬ್ಬರೂ ಈಗ ಆರೋಗ್ಯವಾಗಿದ್ದಾರೆಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ರವಿ ತಿಳಿಸಿದ್ದಾರೆ.

Related Articles

Leave a Reply

Your email address will not be published.

Back to top button