ಕಬ್ಬಿನ ಬಿಲ್’ಗಾಗಿ ಸಕ್ಕರೆ ಕಾರ್ಖಾನೆಗಳಿಗೆ ಮೂರು ದಿನಗಳ ಗಡುವು: ಸಚಿವ ಮುನೇನಕೊಪ್ಪ ಖಡಕ್ ಎಚ್ಚರಿಕೆ
ಹುಬ್ಬಳ್ಳಿ: ರೈತರ ಕಬ್ಬಿನ ಬಿಲ್ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಮೂರು ದಿನಗಳ ಗಡುವು ನೀಡಲಾಗಿದೆ. ರೈತರು ಯಾರು ಕೂಡಾ ಆತಂಕ ಪಡುವ ಅಗತ್ಯವಿಲ್ಲ. ನಮ್ಮ ಸರ್ಕಾರ ಯಾವಾಗಲೂ ರೈತ ಪರವಾಗಿರುತ್ತದೆ ಎಂದು ಕೈಮಗ್ಗ ಮತ್ತು ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದ ರೈತರು ಭಯ ಪಡುವ ಆಗತ್ಯವಿಲ್ಲ. ಈಗಾಗಲೇ ರಾಜ್ಯದ ಸಕ್ಕರೆ ಕಾರ್ಖಾನೆಗಳೊಂದಿಗೆ ಮೀಟಿಂಗ್ ಮಾಡಲಾಗಿದೆ. ಅವರಿಗೆ ಕಬ್ಬಿನ್ ಬಾಕಿ ಬಿಲ್ ನೀಡುವಂತೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ. ಇನ್ನು ಏಳು ಸಕ್ಕರೆ ಕಾರ್ಖಾನೆಗಳು ಬಾಕಿ ಬಿಲ್ ಉಳಿಸಿಕೊಂಡಿವೆ. ಅದನ್ನು ಮೂರು ದಿನದಲ್ಲೇ ಪಾವತಿ ಮಾಡಲು ಹೇಳಿದ್ದೇನೆ. ರೈತರ ಏಳಿಗೆ ನಮ್ಗೆ ಶ್ರೀರಕ್ಷೆ ಆಗಿದೆ. ಅದಕ್ಕಾಗಿ ರೈತರು ಆತಂಕಕ್ಕೆ ಒಳಗಾಗಬಾರದು. ಪಕ್ಷಪಾತ ಮಾಡದೇ ಅಂಕಿ ಸಂಖ್ಯೆಯ ದಾಖಲೆ ನೀಡಿದ್ದೇನೆ. ಯಾರೇ ಸಕ್ಕರೆ ಬಿಲ್ ಉಳಿಸಿಕೊಂಡಿದ್ರೂ ತಕ್ಷಣವೇ ಪಾವತಿಗೆ ಸೂಚನೆ ನೀಡಿದ್ದೇನೆ ತಿಳಿಸಿದರು.
ನಾನು ಕೂಡಾ ಬಡತನದಿಂದಲ್ಲೇ ಹಾಗುಇ ಹೋರಾಟಗಳಿಂದ ಮೇಲೆ ಬಂದಿದ್ದೇನೆ. ಬಡವರ ಸೂರು ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಹೋರಾಟಗಳು ಆಗಿವೆ. ಸ್ಲಂ ಬೋರ್ಡ್ ಗಳನ್ಮು ಸರ್ಕಾರವೇ ನೋಂದಣಿ ಮಾಡುತ್ತಿದೆ. ಅಲ್ಲದೆ ನಡವರಿಗೆ ಮಾದರಿಯಲ್ಲಿ ಮನೆಗಳ ನಿರ್ಮಾಣಗಳನ್ನು ಮಾಡಲಾಗುತ್ತಿದೆ. ಜೊತೆಗೆ ಕೊರೊನಾ ಕಾರಣದಿಂದ ಹಾಗೇ ಉಳಿದುಕೊಂಡಿದ್ದ ಎಲ್ಲ ಕಾಮಗಾರಿಗಳಿಗೆ ಮತ್ತೆ ವೇಗ ನೀಡುವ ಕೆಲಸ ಸರ್ಕಾರ ಮಾಡುತ್ತಿದೆ.ಬರುವ ದಿನಗಳಲ್ಲಿ ಬಡವರಿಗಾಗಿ ನಿರ್ಮಿಸುತ್ತಿರುವ ಮನೆಗಳನ್ನು ಹಸ್ತಾಂತರ ಮಾಡಲಾಗುವುದು ಎಂದರು.