Latest

ಕಳ್ಳತನ‌ ಮಾಡಿ ಪರಾರಿಯಾಗಿದ್ದ ಆರೋಪಿ ಬಂಧನ: ಆರು ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ವಶ

ದಾವಣಗೆರೆ: ಚನ್ನಗಿರಿಯ ಕಣದಸಾಲು ಬಡಾವಣೆಯ ಕುರಿಫಾರಂ ಮಾಲೀಕನ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಲಾರದ ವಿಜಯ್ ಬಂಧಿತ ಆರೋಪಿ. ಈತನಿಂದ 6.60 ಲಕ್ಷ ರೂಪಾಯಿ ಮೌಲ್ಯದ 132 ಗ್ರಾಂ ಬಂಗಾರದ ಆಭರಣಗಳನ್ನು ಚನ್ನಗಿರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚನ್ನಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ. ಎಂ. ಸಂತೋಷ್ ಮಾರ್ಗದರ್ಶನದಲ್ಲಿ ಚನ್ನಗಿರಿ ಠಾಣೆಯ ಇನ್ ಸ್ಪೆಕ್ಟರ್ ಪಿ. ಬಿ. ಮಧು ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

ಕೆ. ಹೆಚ್. ಶಿವಮೂರ್ತಿ ಎಂಬುವವರಿಗೆ ಸೇರಿದ ಕುರಿ ಫಾರ್ಮ್ ಹೌಸ್‌ನಲ್ಲಿ ಕೆಲಸಕ್ಕೆ ಸೇರಿದ ಐದೇ ದಿನಗಳಲ್ಲಿ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂಪಾಯಿ ನಗದನ್ನ ದೋಚಿಕೊಂಡು ವಿಜಯ್ ಎಂಬಾತ ಅಕ್ಟೋಬರ್ 7ರಂದು ಪರಾರಿಯಾಗಿದ್ದ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಕಣದಸಾಲು ಬಡಾವಣೆಯ ಕುರಿ ಫಾರ್ಮ್ ಹೌಸ್ ನ ಮಾಲೀಕನ ಮನೆಯಲ್ಲಿ ಈ ಘಟನೆ ನಡೆದಿತ್ತು.

ಕೆಲಸ ಮಾಡುತ್ತಿದ್ದವನಿಗೆ ಮನೆ ಒಡತಿ ಟೀ ಕೊಟ್ಟು ಬಟ್ಟೆ ಒಣಗಿ ಹಾಕೋದಕ್ಕೆ ಹೊರಗಡೆ ಹೋಗಿದ್ದಾರೆ. ಈ ವೇಳೆ ವಿಜಯ್ ಎಂಬಾತ 8 ಲಕ್ಷದಷ್ಟು ಬಂಗಾರ, 20,000 ರೂ. ಕದ್ದುಕೊಂಡು ಹೋಗಿದ್ದ. ಶಿವಮೂರ್ತಿ ಕುರಿ ಫಾರ್ಮ್ ಹೌಸ್ ಬಗ್ಗೆ ಯುಟ್ಯೂಬ್ ನಲ್ಲಿ ತನ್ನ ಮೊಬೈಲ್ ನಂಬರ್ ಸಹಿತ ಪ್ರಚಾರಕ್ಕೆ ಬಿಟ್ಟಿದ್ದರು. ಇದನ್ನು ನೋಡಿದ್ದ ಕೋಲಾರ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಲಕ್ಷ್ಮಮ್ಮ ಎಂಬುವವರ ಮಗನಾಗಿರುತ್ತೇನೆ ಎಂದು ಹೇಳಿಕೊಂಡು ಬಂದಿದ್ದ ಆರೋಪಿ ವಿಜಯ್ ಮೂರು ತಿಂಗಳಿಂದ ಪದೇ ಪದೇ ಪೋನ್ ಮಾಡಿ ನಿಮ್ಮ ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತೇನೆ. ನನಗೆ ಕೆಲಸ ಕೊಡಿ ಎಂದು ಕಾಡಿಬೇಡಿ ಕೆಲಸಕ್ಕೆ ಸೇರಿಕೊಂಡಿದ್ದ. ನಂಬಿಕೆಯೂ ಗಿಟ್ಟಿಸಿಕೊಂಡಿದ್ದ. ಹೀಗಿರುವಾಗ ವಿಜಯನು ಕುರಿ ಫಾರ್ಮ್ ಹೌಸ್‌ ಮಾಲೀಕ ಶಿವಮೂರ್ತಪ್ಪ ಮನೆಗೆ ಟೀ ಕುಡಿಯಲೆಂದು ಹೋಗಿದ್ದ. ಈ ವೇಳೆ ಶಿವಮೂರ್ತಪ್ಪ ನ ಹೆಂಡತಿ ಕಮಲಮ್ಮ ಆರೋಪಿ ವಿಜಯನಿಗೆ ಟೀ ಮಾಡಿಕೊಟ್ಟು ಬಟ್ಟೆಗಳನ್ನು ಮನೆ ಮಹಡಿ ಮೇಲೆ ಒಣಹಾಕಲು ಹೋದ ಸಮಯದಲ್ಲಿ ಟೀ ಕುಡಿಯುತ್ತಿದ್ದ ಆರೋಪಿ ವಿಜಯ ಮನೆಯ ಕಬ್ಬಿಣದ ಬೀರುವಿನ ಪಕ್ಕದಲ್ಲಿದ್ದ ಬೀಗದ ಕೀಯಿಂದ ಬೀರು ತೆಗೆದು ಬಂಗಾರ ಕದ್ದುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button