Latest
Team India Jersey : ಟಿ20 ವಿಶ್ವಕಪ್: ಭಾರತ ತಂಡದ ಜೆರ್ಸಿ ಬಿಡುಗಡೆ
ದುಬೈ: ಯುಎಇ ಮತ್ತು ಒಮನ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದ ಹೊಸ ಜೆರ್ಸಿಯನ್ನು ಕಿಟ್ ಪ್ರಾಜಕರಾದ ಎಂಪಿಎಲ್ ಸ್ಪೋರ್ಟ್ಸ್ ಫೌಂಡೇಷನ್ ಇಂದು ಬಿಡುಗಡೆ ಮಾಡಿದೆ.
ಭಾರತ ತಂಡವನ್ನು ಮೆನ್ ಇನ್ ಬ್ಲೂ ಅಂದು ಕರೆಯಲಾಗುತ್ತಿದೆ. ವಿರಾಟ್ ಕೊಹ್ಲಿ ಪಡೆ ಈ ಬಾರಿಯೂ ಆಕರ್ಷಕ ನೀಲಿ ಜೆರ್ಸಿಯೊಂದಿಗೆ ಅಂಗಣಕ್ಕಿಳಿಯಲಿದೆ.
ಐಸಿಸಿ ರಾಂಕಿಂಗ್ ಆಧಾರದ ಮೇಲೆ ಭಾರತ ಈಗಾಗಲೇ ಸೂಪರ್ 12 ಹಂತ ತಲುಪಿದ್ದು 23ರಂದು ನಡೆಯುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.