ಬೆಳಗಾವಿಗೆ ಭೇಟಿ ನೀಡಿದ ಬೆಂಗಳೂರು ಸತ್ಯಶೋಧನಾ ತಂಡ: ಅರ್ಬಾಜ್ ಸಾವಿಗೆ ನ್ಯಾಯ ಸಿಗುವರೆಗೂ ಹೋರಾಟ
ಬೆಳಗಾವಿ: ಖಾನಪುರದ ಅರ್ಬಾಜ್ ಸಾವಿನ ಘಟನೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಒಳಪಡುತ್ತಿದೆ, ಕಳೆದ ಎರಡು ದಿನದ ಹಿಂದೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ ಪ್ರಗತಿಪರ ಯುವಕರ ತಂಡ ಕೊಲೆ ಪ್ರಕರಣವನ್ನು ಖಂಡಿಸಿತ್ತು.
ಏಳು ಜನರ ಸತ್ಯಶೋಧನ ತಂಡ ಇಂದು ಬೆಳಗಾವಿಗೆ ಭೇಟಿ ನೀಡಿದ್ದು, ಅರ್ಬಾಜ್ ತಾಯಿ, ಬೆಳಗಾವಿ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ, ಸ್ಥಳೀಯ ಸಂಘಟನೆಯ ನಾಯಕರು ಸೇರಿದಂತೆ ಅನೇಕ ಜನರನ್ನ ಸಂಪರ್ಕಿಸಿದ್ದ ಸತ್ಯ ಶೋಧನಾ ತಂಡ ಅನೇಕ ವಿಷಯಗಳ ಮಾಹಿತಿಯನ್ನ ಅಧಿಕೃತವಾಗಿ ತೆಗೆದುಕೊಂಡಿದೆ.
ಅರ್ಬಾಜ್ ಸಾವಿನ ಸಂಪೂರ್ಣ ಮಾಹಿತಿಯನ್ನ ಪಡೆದಿರುವ ತಂಡ ಶೀಘ್ರದಲ್ಲೇ ವರದಿ ತಯಾರಿಸಿ ಪತ್ರಿಕಾ ಪ್ರಕಟನೆಯನ್ನ ಹೊರಡಿಸಲಿದ್ದು, ನಂತರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸಲಾಗುವುದು ತಂಡದ ಸದಸ್ಯ ಆಕಾಶ್ ಬಟ್ಟೋಚಾರ್ಯ ತಿಳಿಸಿದರು.
ಸತ್ಯ ಶೋಧನಾ ತಂಡದಲ್ಲಿ ಅಜಿಂ ಪ್ರೇಮ್ ಜಿ ಯುನಿವರ್ಸಿಟಿ ಪ್ರಾಧ್ಯಾಪಕ ಆಕಾಶ್ ಭಟ್ಟಾಚಾರ್ಯ , ವಕೀಲೆ ಅವನಿ ಚೌಕ್ಸಿ, ಪ್ರೈಟರ್ನಿಟಿ ಮೂವಮೆಂಟ್ ನ ನಿಜಾಮುದ್ದೀನ್, ಸಂಶೋಧನ ತಜ್ಞ ಸಿದ್ಧಾರ್ಥ್ ಜೋಶಿ, ಸಾಮಾಜಿಕ ಹೋರಾಟಗಾರ ತನ್ವಿರ್ ಅಹ್ಮದ್ ಹಾಗೂ ತನಿಖಾ ವರದಿಗಾರ ಜಾಕಿರ್ ಹಾಗೂ ಜುನೈದ್ ಒಳಗಂಡ ತಂಡ ಇದಾಗಿದೆ.
ಸದ್ಯ ಅರ್ಬಾಜ್ ಸಾವಿನ ಪ್ರಕರಣದ ಸಂಪೂರ್ಣ ಮಾಹಿತಿಯನ್ನ ಪಡೆದಿರುವ ಈ ತಂಡ ಶೀಘ್ರವಾಗಿ ಒಂದು ವರದಿಯನ್ನ ತಯಾರುಪಡಿಸಿ ಮಾನವ ಹಕ್ಕುಗಳ ಅಯೋಗಕ್ಕೂ ಸಲ್ಲಿಸುವುದಾಗಿ ತಿಳಿಸಿದೆ.