Latest
T20 World Cup: ದಕ್ಷಿಣ ಆಫ್ರಿಕಾಕ್ಕೆ ಜಯ: ಬಾಂಗ್ಲಾ, ಲಂಕಾ ಔಟ್
ಅಬು ಧಾಬಿ: ಕಗಿಸೊ ರಬಡಾ (20ಕ್ಕೆ 3) ಮತ್ತು ಆ್ಯನ್ರಿಕ್ ನೋರ್ಜೆ (8ಕ್ಕೆ 3) ಅವರ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶದ ವಿರುದ್ಧ ದಕ್ಷಿಣ ಆಫ್ರಿಕಾ ವಿಕೆಟ್ ಅಂತರದಲ್ಲಿ ಸುಲಭ ಜಯ ದಾಖಲಿಸಿದೆ. ಈ ಫಲಿತಾಂಶ್ ಬಾಂಗ್ಲಾದೇಶ ಮತ್ತು ಶ್ರೀಲಂಕಾವನ್ನು ಟಿ20 ವಿಶ್ವಕಪ್ ನಿಂದ ನಿರ್ಗಮಿಸುವಂತೆ ಮಾಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶವನ್ನು 84 ರನ್ ಗೆ ಕಟ್ಟಿ ಹಾಕಿತು. ಅಲ್ಪ ಮೊತ್ತವನ್ನು ಬೆಂತ್ತಿದ ತೆಂಬಾ ಬೌಮಾ ಪಡೆ 13.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯದ ಗುರಿ ತಲುಪಿತು.
ಈ ಜಯದೊಂದಿಗೆ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ವಿಶ್ವಕಪ್ ನಿಂದ ಬಹುತೇಕ ನಿರ್ಗಮಿಸಿದವು. ಕಗಿಸೊ ರಬಡಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ನಾಯಕ ತೆಂಬಾ ಬೌಮ ಗಳಿಸಿದ ಅಜೇಯ 31 ರನ್ ಜಯದ ಹಾದಿಯನ್ನು ಸುಗಮಗೊಳಿಸಿತು.