Latest

T20 World Cup: ನಾಲ್ಕು ಪಂದ್ಯ ಗೆದ್ದರೂ ಸೆಮಿಫೈನಲ್ ತಲುಪದ ದಕ್ಷಿಣ ಆಫ್ರಿಕಾ

ಶಾರ್ಜಾ: ದಕ್ಷಿಣ ಆಫ್ರಿಕಾ ತಂಡ ಎಷ್ಟು ದುರಾದೃಷ್ಟ ಎಂಬುದು ಆ ತಂಡದ ಯಶಸ್ಸಿನ ಹಾಯಿಯನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ. ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದರೂ ಸೆಮಿಫೈನಲ್ ತಲಪುವಲ್ಲಿ ವಿಫಲವಾಗಿದೆ ಕಾರಣ ರನ್ ರೇಟ್. ಶನಿವಾರ ರಾತ್ರಿ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಟೇಬಲ್ ಟಾಪರ್ ಇಂಗ್ಲೆಂಡ್ ತಂಡದ ವಿರುದ್ಧ ಜಯ ಗಳಿಸಿದರೂ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನಕ್ಕೇ ತೃಪ್ತಿಪಡಬೇಕಾಯಿತು.

ಮೂರು ತಂಡಗಳು ಸಮಾನ (8) ಅಂಕಗಳನ್ನು ಗಳಿಸಿದ್ದವು. ಅವುಗಳಲ್ಲಿ ಉತ್ತಮ ರನ್ ಸರಾಸರಿ ಕಾಯ್ದುಕೊಂಡ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಗಳು ಸೆಮಿಫೈನಲ್ ತಲುಪಿದವು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ದಕ್ಷಿಣ ಆಫ್ರಿಕಾ ಪರ ರಸ್ಸೆ ವ್ಯಾನ್ ಡೆರ್ ಡುಸೆನ್ ಅವರ ಆಕರ್ಷಕ (94*) ಮತ್ತು ಏಡೆನ್ ಮಾರ್ಕ್ರಾಮ್ ಅವರ ಮಿಂಚಿನ ಅರ್ಧ ಶತಕ (52)ದ ನೆರವಿನಿಂದ 189 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು.

ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್ ತಲುಪಬೇಕಿದ್ದರೆ ಇಂಗ್ಲೆಂಡ್ ತಂಡವನ್ನು 131 ರನ್ ಗೆ ನಿಯಂತ್ರಿಸಬೇಕಿತ್ತು. ಆದರೆ 179 ರನ್ ಗಳಿಸಲು ಅವಕಾಶ ಮಾಡಿಕೊಟ್ಟಿತು. ಅಂತಿಮವಾಗಿ 10 ರನ್ ಜಯ ಗಳಿಸಿದರೂ ಮುಂದಿನ ಹಂತ ತಲುಪಲಾಗದೆ ನಡುವೆ ನಿರಾಸೆಯಿಂದ ನಿರ್ಗಮಿಸಿತು.

Related Articles

Leave a Reply

Your email address will not be published. Required fields are marked *

Back to top button