Latest

T20 World Cup: ವಿಶ್ವಕಪ್ ನಲ್ಲಿ ಪಾಕಿಸ್ತಾನಕ್ಕೆ ಶರಣಾದ ಭಾರತ

ದುಬೈ : ಕಳಪೆ ಬ್ಯಾಟಿಂಗ್, ಅತಿಯಾದ ಆತ್ಮ ವಿಶ್ವಾಸ, ಈಗಿನ ಶಕ್ತಿಯ ಬಗ್ಗೆ ಯೋಚಿಸದೆ ಹಿಂದಿನ‌ ಯಶಸ್ಸುಗಳನ್ನೇ ಮೆಲುಕು ಹಾಕುವ ಚಾಳಿ, ಇಬ್ಬನಿ ಎಲ್ಲಕ್ಕಿಂತ ಮುಖ್ಯವಾಗಿ ಪಾಕಿಸ್ತಾನದ ಆಲ್ರೌಂಡ್ ಆಟದ ಪರಿಣಾಮ ಭಾರತ ತಂಡ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಬಾರಿಗೆ ಆಘಾತ ಕಂಡಿದೆ.

ಪಂದ್ಯಕ್ಕೆ ಮುನ್ನ ಭಾರತ ಹಿಂದಿನ ಸಾಧನೆಯನ್ನೇ ಮೆಲುಕು ಹಾಕುತ್ತಿತ್ತು, ಪಾಕಿಸ್ತಾನ ಹಿಂದಿನ ಸೋಲನ್ನು ಮರೆತು ಹೊಸ ಇತಿಹಾಸ ಬರೆಯುವ ಛಲದೊಂದಿಗೆ ಅಂಗಣಕ್ಕಿಳಿಯಿತು. ಅದು ಪಂದ್ಯ ಆರಂಭಗೊಂಡ ನಾಲ್ಕನೇ ಎಸೆತದಲ್ಲೆ ಸ್ಪಷ್ಟವಾಯಿತು. ಉತ್ತಮ ಪ್ರದರ್ಶನ ತೋರುತ್ತಿದ್ದ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಬೇಗನೇ ಔಟ್ ಆಗುವ ಮೂಲಕ ಭಾರತದ ಸೋಲಿಗೆ ಮುನ್ನುಡಿ ಬರೆದರು.‌ನಾಯಕ ವಿರಾಟ್ ಕೊಹ್ಲಿ (57) ಮತ್ತು ರಿಶಬ್ ಪಂತ್ (39) ಹೊರತುಪಡಿಸಿದರೆ ಭಾರತದ ಇತರ ಬ್ಯಾಟ್ಸ್ ಮನ್ ಗಳು ಪಾಕ್ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಫಲರಾದರು. ಪರಿಣಾಮ ಕೇವಲ 151 ರನ್ ಗೆ ತೃಪ್ತಿ ಪಡಬೇಕಾಯಿತು. ಶಾಹೀನ್ ಅಫ್ರಿದಿ (31ಕ್ಕೆ3) ಅದ್ಭುತ ಬೌಲಿಂಗ್ ಪ್ರದರ್ಶಿಸಿ ಭಾರತದ ಸೋಲಿಗೆ ಅಗತ್ಯ ಬೇಕಾಗಿರುವ ವೇದಿಕೆ ಸೃಷ್ಟಿಸಿದರು.

152 ರನ್ ಗುರಿಹೊತ್ತ ಪಾಕಸ್ತಾನದ ಪರ ಆರಂಭಿಕ ಆಟಗಾರರಾದ ಮೊಹಮ್ಮದ್ ರಿಜ್ವಾನ್ (79) ಮತ್ತು ಬಾಬರ್ ಅಜಾಂ (68) ಇನ್ನೂ 2.1 ಓವರ್ ಬಾಕಿ ಇರುವಾಗಲೇ ಐತಿಹಾಸಿಕ ಜಯ ತಂದಿತ್ತರು.

ಪಾಕಿಸ್ತಾನ ವಿರುದ್ಧದ ಪಂದ್ಯವೆಂದರೆ ಅದೊಂದು ಯುದ್ಧ ಎಂದೇ ಬಿಂಬಿಸುತ್ತಿದ್ದ ಮಾಧ್ಯಮಗಳು ನಿನ್ನೆ ಕೇವಲ‌ ಫಲಿತಾಂಶವನ್ನು ಮಾತ್ರ ಪ್ರಕಟಿಸಿದವು. ಸೋತ ನಂತರ ವಿರಾಟ್ ಕೊಹ್ಲಿ ತಲೆ ಮೇಲೆ ಕೈ ಇಟ್ಟುಕೊಂಡು ದೇಶವೇ ಮುಳುಗಿಹೋಯಿತು ಎಂಬಂತೆ ವರ್ತಿಸದೆ ಪಾಕಿಸ್ತಾನ ತಂಡದ ಸಾಧನೆಯನ್ನು ಗುಣಗಾನ ಮಾಡಿದರು. ಮಾತ್ರವಲ್ಲ ಆ ತಂಡದ ಆಟಗಾರರನ್ನು ತಬ್ಬಿಕೊಂಡು ಶುಭ ಹಾರೈಸಿದರು.

ಟಿ20 (5) ಮತ್ತು 50 ಓವರ್ ಗಳ(7) ವಿಶ್ವಕಪ್ ಸೇರೀದಂದತೆ ಭಾರತ ಇದುವರೆಗೂ ಸತತ 12 ಪಂದ್ಯಗಳಲ್ಲಿ ಸೋತಿದ್ದ ಪಾಕಿಸ್ತಾನಕ್ಕೆ 1992 ರ ನಂತರ ವಿಶ್ವಕಪ್ ನಲ್ಲಿ ಇದು ಮೊದಲ ಜಯ.

Related Articles

Leave a Reply

Your email address will not be published. Required fields are marked *

Back to top button