Latest
ವಿಶ್ವಕಪ್: ಭಾರತ ಮನೆ ತಲುಪಲು ಇನ್ನೊಂದೇ ಹೆಜ್ಜೆ
ದುಬೈ: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡ ಭಾರತವನ್ನು 110 ರನ್ ಗೆ ಕಟ್ಟಿಹಾಕಿತು. ಕಿವೀಸ್ ಪಡೆ 14.3 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಜಯದ ಗುರಿ ತಲುಪಿತು. ಭಾರತ ಸತತ ಎರನೇ ಸೋಲು ಅನುಭವಿಸಿ ಗುಂಪಿನಲ್ಲಿ ಕ್ರಿಕೆಟ್ ನಲ್ಲಿ ಅಂಬೆಗಾಲಿಡುತ್ತಿರುವ ನಮೀಬಿಯಾಕ್ಕಿಂತಲೂ ಕೆಳಗಿಳಿಯಿತು.
ರವೀಂದ್ರ ಜಡೇಜಾ (26) ಮತ್ತು ಹಾರ್ದಿಕ್ ಪಾಂಡ್ಯ (23) ಸ್ವಲ್ಪ ಹೊತ್ತು ಕಿವೀಸ್ ದಾಳಿಯನ್ನು ಎದುರಿಸಿದರು. ಸೂರ್ಯಕುಮಾರ್ ಯಾದವ್ ಬದಲಿಗೆ ಆಟಕ್ಕಿಳಿದ ಇಶಾನ್ ಕಿಶನ್ ಕೇವಲ ಒಂದು ಬೌಂಡರಿಗೆ ತೃಪ್ತಿಪಟ್ಟರು. ಕೆ.ಎಲ್ ರಾಹುಲ್, ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ ತಮ್ಮ ಜವಾಬ್ದಾರಿಯನ್ನೇ ಮರೆತರು.
111ರನ್ ಗುರಿಹೊತ್ತ ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರ ಡೇರಿಲ್ ಮಿಚೆಲ್ (49) ಉತ್ತಮ ತಳಪಾಯ ಹಾಕಿದರು. ನಾಯಕ ಕೇನ್ ವಿಲಿಯಮ್ಸನ್ (33*) ತಾಳ್ಮೆಯ ಆಟವಾಡಿ ಜಯ ತಂದುಕೊಟ್ಟರು. ಇಶ್ ಸೋಧಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು