Latest

T20 World Cup: ಆಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 66 ರನ್ ಗಳ ಭರ್ಜರಿ ಜಯ

ಅಬಧಾಬಿ: ಅಫಘಾನಿಸ್ತಾನದ ವಿರುದ್ಧ 66 ರನ್ ಜಯಗಳಿಸಿದ ಭಾರತ ಟಿ20 ವಿಶ್ವಕಪ್ ನಲ್ಲಿ ಜಯದ ಖಾತೆ ತೆರೆದಿದೆ. ಈ ಜಯ ಸೆಮಿಫೈನಲ್ ತಲಪುವ ಭಾರತದ ಆಸೆಯನ್ನು ಜೀವಂತವಾಗಿರಿಸಿದೆ. ಆದರೆ ಇತರ ತಂಡಗಳ ಫಲಿತಾಂಶವನ್ನು ಆಧರಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ 210 ರನ್ ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ರೋಹಿತ್ ಶರ್ಮಾ (74), ಕೆ.ಎಲ್. ರಾಹುಲ್ (69), ಹಾರ್ದಿಕ್ ಪಾಂಡ್ಯ (35) ಮತ್ತು ರಿಶಬ್ ಪಂತ್ (27) ಅದ್ಭತ ಬ್ಯಾಟಿಂಗ್ ಪ್ರದರ್ಶಿಸಿ ಬೃಹತ್ ಮೊತ್ತಕ್ಕೆ ನೆರವಾದರು.‌ ಭಾರತ ಈ ಟಿ20 ವಿಶ್ವಕಪ್ ನಲ್ಲಿ ದ್ವಿಶತಕ ದಾಖಲಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ನ್ಯೂಜಿಲೆಂಡ್ ವಿರುದ್ಧ ಸೋಲುವ ಮೂಲಕ ಭಾರತದ ವಿಶ್ವಕಪ್ ಕನಸು ನುಚ್ಚು ನೀರಾಗಿತ್ತು. ರನ್ ಸರಾಸರಿ ಮತ್ತು ಉಳಿದ ಪಂದ್ಯಗಳಲ್ಲಿ ಜಯ ಅಲ್ಲದೆ ಎರಡನೇ ಸ್ಥಾನದಲ್ಲಿರು ಮತ್ತು ಇತರ ತಂಡಗಳ ಸೋಲು ಭಾರತದ ಚಿಕ್ಕ ಆಸೆಗೆ ಅವಕಾಶ ನೀಡಿತ್ತು. ಸಾಕಷ್ಟು ಟೀಕೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ ಪಡೆಗೆ ಈ ಜಯ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು.

ರಾಹುಲ್ ಹಾಗೂ ರೋಹಿತ್ ಆರಂಭಿಕ ಜೊತೆಯಾಟದಲ್ಲಿ 140 ರನ್ ಗಳಿಸಿ ಟಿ20 ವಿಶ್ವಕಪ್ ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟವಾಡಿದ ಜೋಡಿ ಹೆಗ್ಗಳಿಕೆಗೆ ಪಾತ್ರವಾಯಿತು. 0.073 ರನ್ ಸರಾಸರಿಯನ್ನು ಹೊಂದಿರುವ ಭಾರತ ಮುಂದಿನ ಪಂದ್ಯಗಳಲ್ಲಿ ನಮೀಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಸೆಣಸಲಿದೆ.

Related Articles

Leave a Reply

Your email address will not be published.

Back to top button