Latest

T20 World Cup: ಬಟ್ಲರ್ ಶತಕ: ಇಂಗ್ಲೆಂಡ್ ಅಗ್ರ ಸ್ಥಾನಕ್ಕೆ

ಶಾರ್ಜಾ : ಜೋಸ್ ಬಟ್ಲರ್ (106*) ಪ್ರಸಕ್ತ ಟಿ20 ವಿಶ್ವಕಪ್ ನಲ್ಲಿ ಮೊದಲ ಶತಕ ದಾಖಲಿಸುವುದರೊಂದಿಗೆ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ 26 ರನ್ ಅಂತರದಲ್ಲಿ ಜಯಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

164 ರನ್ ಬೃಹತ್ ಮೊತ್ತವನ್ನು ಬೆಂಬತ್ತಿದ ಶ್ರೀಲಂಕಾ ಕೇವಲ 137 ರನ್ ಗಳಿಸುವಲ್ಲಿ ಶಕ್ತವಾಯಿತು. ನಿರೀಕ್ಷೆಯಂತೆ ಜೋಸ್ ಬಟ್ಲರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.‌
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಶ್ರೀಲಂಕ ತಂಡ ಇಂಗ್ಲೆಂಡಿನ ಬಲಿಷ್ಠ ಬ್ಯಾಟಿಂಗ್ ಶಕ್ತಿಯನ್ನು ನಿಯಂತ್ರಿಸುವಲ್ಲಿ ವಿಫಲವಾಯಿತು.

ಜಾಸನ್ ರಾಯ್ (9), ಡೇವಿಡ್ ಮಲಾನ್ (6) ಹಾಗೂ ಜಾನಿ ಬೈರ್ಸ್ಟ್ರಾ (0) ಅವರು ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದರೂ ಬಟ್ಲರ್ ಅವರ ಅಜೇಯ ಶತಕ ಇಂಗ್ಲೆಂಡಿನ ಬೃಹತ್ ಮೊತ್ತಕ್ಕೆ ನೆರವಾಯಿತು. 67 ಎಸೆತಗಳನ್ನೆದುರಿಸಿದ ಬಟ್ಲರ್ 6 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ ಅಜೇಯ 101 ರನ್ ಗಳಿಸಿ ಈ ಚಾಂಪಿಯನ್ಷಿಪ್ ನಲ್ಲಿ ಶತಕ ಗಳಿಸಿದ ಮೊದಲ ಆಟಗಾರರೆನಿಸಿದರು. ನಾಯಕ ಇಯಾನ್ ಮಾರ್ಗನ್ ಗಳಿಸಿದ 40 ರನ್ ಕೂಡ ಇಂಗ್ಲೆಂಡ್ ನ ಜಯದಲ್ಲಿ ಪ್ರಮುಖ ಪಾತ್ರವಹಿಸಿತು.

Related Articles

Leave a Reply

Your email address will not be published.

Back to top button