Latest

T20 World Cup: ಕಿವೀಸ್‌ಗೆ ಸೋಲುಣಿಸಿ ಅಗ್ರಸ್ಥಾನಕ್ಕೇರಿದ ಪಾಕ್

ಶಾರ್ಜಾ : ಮೊದಲ ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ಆತ್ಮವಿಶ್ವಾಸದಲ್ಲಿದ್ದ ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ನ ತನ್ನ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಜಯ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡ ಪಾಕಿಸ್ತಾನ ಬಲಿಷ್ಠ ಕಿವೀಸ್‌ ತಂಡವನ್ನು 134ರನ್‌ ಗೆ ಕಟ್ಟಿ ಹಾಕಿತು. ನ್ಯೂಜಿಲೆಂಡ್‌ ಉತ್ತಮ ರೀತಿಯಲ್ಲಿ ತಂಡವನ್ನು ಕಟ್ಟಿ ನಿಯಂತ್ರಣ ಸಾಧಿಸಿದ್ದರೂ ಶೊಯೇಬ್‌ ಮಲಿಕ್‌ ಮತ್ತು ಆಸಿಫ್‌ ಅಲಿ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಮಲಿಕ್‌ 20 ಎಸೆತಗಳಲ್ಲಿ 2 ಬಂಡರಿ 1 ಸಿಕ್ಸರ್‌ ನೆರವಿನಿಂದ 26 ರನ್‌ ಗಳಿಸಿದರೆ ಆಸಿಫ್‌ ಅಲಿ ಕೇವಲ ಕೇವಲ 12 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 23 ರನ್‌ ಸಿಡಿಸಿ ತಂಡಕ್ಕೆ ಅಮೂಲ್ಯ ಜಯ ತಂದುಕೊಟ್ಟರು. ಭಾರತದ ವಿರುದ್ಧದ ಜಯದ ರೂವಾರಿ ಮೊಹಮ್ಮದ್‌ ರಿಜ್ವಾನ್‌ 33 ರನ್‌ ಗಳಿಸಿದ್ದರು. 22 ರನ್‌ ಗೆ 4 ವಿಕೆಟ್‌ ಗಳಿಸಿದ್ದ ಹ್ಯಾರಿಸ್‌ ರೌಫ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಪಾಕಿಸ್ತಾನಕ್ಕೆ ದಕ್ಕಿದ ಎರಡನೇ ಜಯ ಮತ್ತು ನ್ಯೂಜಿಲೆಂಡಿನ ಮೊದಲ ಸೋಲು ಭಾರತಕ್ಕೆ ಮತ್ತಷ್ಟು ಸಂಕಟವನ್ನು ತಂದೊಡ್ಡಿದೆ ಮುಂದಿನ ಪಂದ್ಯಗಳಲ್ಲಿ ಭಾರತ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಅ,31 ರಂದು ನಡೆಯುವ ಸೂಪರ್‌ 12 ಎರಡಮೇ ಪಂದ್ಯ ಭಾರತದ ಪಾಲಿಗೆ ಕ್ವಾರ್ಟರ್‌ ಫೈನಲ್‌ ಪಂದ್ಯ ಎನಿಸಲಿದೆ.

Related Articles

Leave a Reply

Your email address will not be published.

Back to top button