Latest

T20 world Cup: ಸೋತ ಅಫ್ಘಾನಿಸ್ತಾನ ; ಭಾರತಕ್ಕಿಲ್ಲ ಸೆಮಿಫೈನಲ್ ಸ್ಥಾನ

ಅಬ ಧಾಬಿ: ನ್ಯೂಜಿಲೆಂಡ್ ತಂಡ ಅಫ್ಘಾನಿಸ್ತಾನದ ವಿರುದ್ಧ ಜಯ ಗಳಿಸುವುದರೊಂದಿಗೆ ಸೆಮಿಫೈನಲ್ ತಲಪುವ ಭಾರತದ ಆಸೆ ಸಂಪೂರ್ಣ ದೂರವಾಯಿತು. ಇದರೊಂದಿಗೆ ಪಾಕಿಸ್ತಾನ, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ.

ಅಫ್ಘಾನಿಸ್ತಾನ ಗೆದ್ದರೆ ನಮೀಬಿಯಾ ವಿರುದ್ಧ ಜಯ ಗಳಿಸಿ ರನ್ ಸರಾಸರಿಯೊಂದಿಗೆ ಸೆಮಿಫೈನಲ್ ತಲುಪಲು ಭಾರತಕ್ಕೆ ಅವಕಾಶ ಇದ್ದಿತ್ತು. ಆದರೆ ನ್ಯೂಜಿಲೆಂಡ್ ಅದಕ್ಕೆ ಅವಕಾಶ ಕೊಡಲಿಲ್ಲ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫಘಾನಿಸ್ತಾನ ದ ಯೋಜನೆ ತಲೆಕೆಳಗಾಯಿತು. ಕೇವಲ 124 ರನ್ ಗಳಿಸಿತು. ನ್ಯೂಜಿಲೆಂಡ್ ಇನ್ನೂ 11 ಎಸೆತ ಬಾಕಿ ಇರುವಾಗಲೇ 2 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು.

ಡಿವೊನ್ ಕಾನ್ವೆ (36) ಮತ್ತು ಕೇನ್ ವಿಲಿಯಮ್ಸನ್ (40) ತಾಳ್ಮೆಯ ಆಟವಾಡಿ ಜಯ ತಂದಿತ್ತರು. ಇದಕ್ಕೂ ಮುನ್ನ ಅಫ್ಘಾನಿಸ್ತಾನದ ಪರ ನಬಿಯುಲ್ಲಾ ಜರ್ದಾನ್ ಒಂಟಿಯಾಗಿ ಹೋರಾಟ ನೀಡಿ 73 ರನ್ ಗಳಿಸಿ ತಂಡದ ಸಾಧಾರಣ ಮೊತ್ತಕ್ಕೆ ನೆರವಾದರು. 17 ರನ್ ಗೆ 3 ವಿಕೆಟ್ ಗಳಿಸಿದ ಟ್ರೆಂಟ್ ಬೊಲ್ಟ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Related Articles

Leave a Reply

Your email address will not be published.

Back to top button