ದೆಹಲಿ ವಿವಿಯ ಎರಡು ಹೊಸ ಕಾಲೇಜುಗಳಿಗೆ ʼಸಾವರ್ಕರ್ʼ, ʼಸುಷ್ಮಾ ಸ್ವರಾಜ್ʼ ಹೆಸರು
ನವದೆಹಲಿ: ದೆಹಲಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಹೊಸದಾಗಿ ಆರಂಭಿಸಲು ಉದ್ದೇಶಿಸಿರುವ ಎರಡು ಕಾಲೇಜುಗಳಿಗೆ ʼಸಾವರ್ಕರ್ʼ ಮತ್ತು ʼಸುಷ್ಮಾ ಸ್ವರಾಜ್ʼ ಹೆಸರಿಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ದೆಹಲಿ ವಿಶ್ವವಿದ್ಯಾಲಯದ ಕಾರ್ಯನಿರ್ವಹಣಾ ಮಂಡಳಿ ತಿಳಿಸಿದೆ.
ನಜಾಫ್ ಗಡ ಮತ್ತು ಫತೇಪುರ ಬೇರಿಯಲ್ಲಿ ಹೊಸ ಕಾಲೇಜುಗಳ ಸ್ಥಾಪನೆಗೆ ಭೂಮಿ ಮಂಜೂರಾಗಿದ್ದು, ಹೆಸರು ಆಯ್ಕೆ ಮಾಡಿಕೊಳ್ಳುವ ಹೊಣೆಯನ್ನು ಮಂಡಳಿ ಕುಲಪತಿಯವರಿಗೆ ಬಿಟ್ಟಿತ್ತು. ಕಳೆದ ಆಗಸ್ಟ್ ನಲ್ಲಿ ನಡೆದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿ ಹೆಸರನ್ನು ಅಂತಿಮಗೊಳಿಸುವ ನಿರ್ಧಾರವನ್ನು ಕುಲಪತಿಗಳಿಗೆ ಬಿಡಲಾಗಿತ್ತು ಎಂದು ಮಂಡಳಿ ಸದಸ್ಯೆ ಸೀಮಾದಾಸ್ ಸ್ಪಷ್ಟಪಡಿಸಿದ್ದಾರೆ.
ಖ್ಯಾತ ಶಿಕ್ಷಣ ತಜ್ಞರ ಹೆಸರಿಡುವಂತೆ ನಾವು ಈ ಹಿಂದೆ ಸಲಹೆ ಮಾಡಿದ್ದೆವು ಪ್ರಸ್ತಾಪಿಸಿದ್ದ ಹೆಸರುಗಳ ಪಟ್ಟಿಯಲ್ಲಿ ಸ್ವಾಮಿ ವಿವೇಕಾನಂದ, ವಲ್ಲಭಬಾಯಿ ಪಟೇಲ್, ಅಟಲ್ ಬಿಹಾರಿ ವಾಜಪೇಯಿ, ಸಾವಿತ್ರಿ ಬಾಯಿ ಫುಲೆ ಮುಂತಾದ ಹೆಸರುಗಳಿದ್ದವು. ಆದರೆ ಅ.29ರಂದು ನಡೆದ ಸಭೆಯಲ್ಲಿ ‘ಸಾವರ್ಕರ್ʼ, ʼಸುಷ್ಮಾ ಸ್ವರಾಜ್ʼ ಹೆಸರು ಅಂತಿಮಪಡಿಸಿದ್ದಾಗಿ ಕುಲಪತಿ ತಿಳಿಸಿದ್ದಾರೆ