Latest
ಅಫ್ಘಾನಿನ ಮತ್ತೊಂದು ಶಿಯಾ ಮಸೀದಿಯಲ್ಲಿ ಬಾಂಬ್ ಸ್ಫೋಟ: 47 ಮಂದಿ ಸಾವು
ಕಂದಹಾರ್: ಕುಂಡುಝ್ ನಗರದ ಶಿಯಾ ಮುಸ್ಲಿಮರ ಮಸೀದಿಯ ಮೇಲೆ ಆತ್ಮಾಹುತಿ ದಾಳಿ ನಡೆದ ಒಂದು ವಾರದ ಬಳಿಕ ಕಂದಹಾರ್ ನಲ್ಲಿ ಮತ್ತೊಂದು ಶಿಯಾ ಮಸೀದಿಯಲ್ಲಿ ಶುಕ್ರವಾರ ನಡೆದ ಪ್ರಾರ್ಥನೆಯ ವೇಳೆ ಭಯೋತ್ಪಾದಕರು ಬಾಂಬ್ ದಾಳಿ ಸ್ಫೋಟಿಸಿದ್ದಾರೆ.
ಸ್ಫೋಟದಲ್ಲಿ 47 ಮಂದಿ ಸಾವನ್ನಪ್ಪಿ 70 ಮಂದಿ ಗಾಯಗೊಂಡಿರುವುದು ವರದಿಯಾಗಿದೆ. ಗಾಯಾಳುಗಳನ್ನು ನಗರದ ಕೇಂದ್ರ ಮಿರ್ವಾಯಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ವೈದ್ಯರು ಎಎಫ್ಪಿಗೆ ತಿಳಿಸಿದ್ದಾರೆ.