Latest

Floating Theatre: ಸರೋವರದಲ್ಲಿ ತೇಲುವ ಸಿನಿಮಾ ಮಂದಿರ

ನವದೆಹಲಿ: ದೇಶದಲ್ಲೇ ಪ್ರಥಮ ಬಾರಿಗೆ ತೇಲುವ ಸಿನಿಮಾ ಮಂದಿರವೊಂದನ್ನು ಜಮ್ಮು-ಕಾಶ್ಮೀರದ ದಾಲ್ ಸರೋವರದಲ್ಲಿ ಸ್ಥಾಪಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಈ ಸಿನಿಮಾ ಮಂದಿರ ಸ್ಥಾಪಿಸಲಾಗಿದೆ. ಒಂದು ವಾರದ ಸಂಭ್ರಮಾಚರಣೆ ಕಾರ್ಯಕ್ರಮ ನಡೆದಿದ್ದು, ಜಮ್ಮು-ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಅರುಣ್ ಮೆಹ್ತಾ ಉದ್ಘಾಟಿಸಿದರು.

ಈಗಾಗಲೇ ಬಾಲಿವುಡ್ ಸಿನಿಮಾ ʼಕಾಶ್ಮೀರ್ ಕಿ ಕಾಲಿʼ ಪ್ರದರ್ಶಿಸಲಾಗಿದೆ. ಸರೋವರದ ಮೇಲೆ ಸ್ಥಾಪಿಸಿರುವ ವಶೇಷ ಆಕರ್ಷಣೆಯ ಈ ಸಿನಿಮಾ ಮಂದಿರಕ್ಕೆ ಹೆಚ್ಚಿನ ಪ್ರವಾಸಿಗರು ಹಾಗೂ ಸಿನಿಮಾಸಕ್ತರು ಧಾವಿಸುತ್ತಿದ್ದಾರೆ.

Related Articles

Leave a Reply

Your email address will not be published.

Back to top button