Latest

ಎಲ್ಲ ಧರ್ಮದ ಪರವಾಗಿರುವ ಪಕ್ಷ ಅಂದ್ರೆ ಅದು ಕಾಂಗ್ರೆಸ್: ಸಿದ್ಧರಾಮಯ್ಯ

ಧಾರವಾಡ: ಕಾಂಗ್ರೆಸ್ ಪಕ್ಷ ಮಾತ್ರ ದೇಶದಲ್ಲಿ ಎಲ್ಲ ಜನರ ಪರವಾಗಿದೆ. ದೇಶದಲ್ಲಿಯೇ ಎಲ್ಲ ಧರ್ಮದ ಪರವಾಗಿರುವ ಏಕೈಕ ಪಕ್ಷ ಅಂದ್ರೆ ಅದೂ ಕಾಂಗ್ರೆಸ್ ಆಗಿದೆ. ಅಲ್ಪ ಸಂಖ್ಯಾತರ ಮಕ್ಕಳಿಗೆ‌ ಮಾತ್ರ ಕ್ಷೀರಭಾಗ್ಯ ಹಾಲು ನೀಡಿಲ್ಲ. ರೈತರಿಗೆ ಮೂರು ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಸಾಲ ನೀಡಿದ್ದೇವೆ ಎಂದು ಸಿಎಂ ಬೊಮ್ಮಾಯಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯರು ಪೆದ್ದು ಪೆದ್ದು ತರಹ ಹೇಳಿಕೆಯನ್ನು ನೀಡುತ್ತಿದ್ದಾರೆ. ಪುಡ್ ಸೆಕ್ಯುರಿಟಿ ಆ್ಯಕ್ಟ್ ತಂದವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌, ಅದನ್ನು ಮೋದಿಯವರು ತಂದಿಲ್ಲ. ಅಲ್ಲದೆ ಗುಜರಾತ್, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದಲ್ಲಿ ಸರ್ಕಾರಗಳು ಇವೆ. ಆದರೆ ಅಲ್ಲಿ ಯಾಕೆ ಉಚಿತವಾಗಿ ಬಡವರಿಗೆ ಅಕ್ಕಿ ಯಾಕೆ ನೀಡುತಿಲ್ಲ ಎಂದು ಪ್ರಶ್ನೆ ಮಾಡಿದರು. ಬರೀ ಬಿಜೆಪಿ ನಾಯಕರು ಸುಳ್ಳುಗಳನ್ನು ಹೇಳುತ್ತಾ ಹೋಗುವುದಾಗಿದೆ. ಈ ಕುರಿತು ಮಾಧ್ಯಮಗಳು ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಬೇಕು ಎಂದರು.

ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ:

ರಾಜ್ಯದಲ್ಲಿ ನಡೆಯುತ್ತಿರು ಬೈ ಎಲೆಕ್ಷನಲ್ಲಿ ಬಿಜೆಪಿಗರಿಗೆ ಏನು ಅಭಿವೃದ್ಧಿ ಮಾಡಿದ್ದೇವೆ ಎಂಬುವುದನ್ನು ಹೇಳಿಕೊಳ್ಳುವುದಕ್ಕೆ ಏನು ಇಲ್ಲ. ರಾಜ್ಯದಲ್ಲಿ ಬಿಜೆಪಿ ಅವರು ಅಧಿಕಾರ ವಹಿಸಿಕೊಂಡು ಎರಡು ಕಾಲ ವರ್ಷ ಆಗುತ್ತಾ ಬಂದಿದೆ. ಅವರ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿವೆ. ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ನಿರಾಶ್ರಿತರಿಗೆ ಅಧಿಕಾರವಹಿಸಿಕೊಂಡ ಮೇಲೆ ಇಲಗಲಿಯವರೆಗೂ ಒಂದು ಮನೆಯನ್ನು ನೀಡಿದಿಲ್ಲ, ಆದರೆ ಈಗ ಬೈ ಎಲೆಕ್ಷನ್ ಬಂದ ಸಮಯದಲ್ಲಿ ನಾಲ್ಕು ಸಾವಿರ ಮನೆ‌ ನೀಡಿದ್ದೇವೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಒಂದು ಮನೆಯನ್ನು ಮುಖ್ಯಮಂತ್ರಿಗಳು ನೀಡಿಲ್ಲ, ಅಲ್ಲದೆ ಒಂದೇ ಒಂದು ರಸ್ತೆ ಅಭಿವೃದ್ಧಿ ಮಾಡಿಲ್ಲ. ಹಾನಗಲ್ ದಿಂದ ಶಿಕಾರಿಪುರ ರಸ್ತೆ ಅಭಿವೃದ್ಧಿ ಮಾಡಿದ್ದು ನಾವು, ಯಾವುದೇ ಯಡಿಯೂರಪ್ಪ ಅಥವಾ ಬೊಮ್ಮಾಯಿ ಅಲ್ಲ. ನಮ್ಮ ಸರ್ಕಾರದ ಸಾಧನೆಯನ್ನು ಜನ ಈಗ ಮೆಲುಕು ಹಾಕಲು ಪ್ರಾರಂಭಿಸಿದ್ದಾರೆ. ಮತ್ತೆ ರಾಜ್ಯದಲ್ಲಿ ಕಾಂಗ್ರೆಸದ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದು ಜನರು ಅಪೇಕ್ಷೆ ಹೊಂದಿದ್ದಾರೆ. ಹಾಗಾಗಿ ಬೈ ಎಲೆಕ್ಷನ್‌ ನಡೆಯುತ್ತಿರುವ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಎದ್ದು ಕಾಣುತ್ತಿದೆ. ಬಿಜೆಪಿಯವರು ಬರೀ ದಿಡ್ಡು ಕೊಟ್ಟ ಮತ ಹಾಕುಸಿಕೊಳ್ಳೋ ಯೋಚನೆಯಲ್ಲಿ ಇರುತ್ತಾರೆ. ಅವರ ಸಾಧನೆ ಅಂದರೆ ಅದೂ ಬೆಲೆ ಏರಿಕೆ ಮಾಡಿರುವುದೇ ಅವರ ದೊಡ್ಡ ಸಾಧನೆಯಾಗಿದೆ ವಾಗ್ದಾಳಿ ನಡೆಸಿದರು.

ಬಿಜೆಪಿಯವರದೂ ಸುಳ್ಳು ಟ್ವಿಟ್ ಮಾಡುವುದೇ

ಇನ್ನೂ ಸ್ವಾಮೀಜಿಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯನವರು ಅವಮಾನುಸುತ್ತಿದ್ದಾರೆ‌ ಎಂಬ ಬಿಜೆಪಿ ಟ್ವಿಟ್ ಕುರಿತು ಪ್ರತಿಕ್ರಿಯೆ ನೀಡಿ, ನಾನು‌ ಸ್ವಾಮೀಜಿಗಳ ಬಗ್ಗೆ ಮಾತೇ ಆಡಿಲ್ಲ. ಅವರು ಮಾಡಿರುವ ಟ್ವಿಟ್ ಸುಳ್ಳಾಗಿದೆ. ಬಿಜೆಪಿಯವರದೂ ಸುಳ್ಳು ಟ್ವಿಟ್ ಮಾಡುವುದನ್ನೇ ಕಸಬಾಗಿಸಿಕೊಂಡಿದ್ದಾರೆ ಎಂದು ಕೀಡಿಕಾರಿದರು.

Related Articles

Leave a Reply

Your email address will not be published.

Back to top button