Latest

ಪ್ರಚಾರ ಕಾರ್ಯದ ಮಧ್ಯೆಯೂ ಜಿಮ್ ನಲ್ಲಿ ದೈಹಿಕ ಕಸರತ್ತು ಮಾಡಿದ ಸಿದ್ದರಾಮಯ್ಯ

ಹುಬ್ಬಳ್ಳಿ : ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಹಾನಗಲ್ ಮತ್ತು ಸಿಂದಗಿ ಕ್ಷೇತ್ರದ ಉಪ ಸಮರಕ್ಕೆ ರಾಜಕೀಯ ಪಕ್ಷಗಳು ತಂತ್ರ ಪ್ರತಿ ತಂತ್ರ ರೂಪಿಸುವ ಮೂಲಕ ಎರಡು ಕ್ಷೇತ್ರಗಳನ್ನು ತೆಕ್ಕೆಗೆ ತೆಗೆದುಕೊಳ್ಳಲು ಎಲ್ಲಿಲ್ಲದ ಹರಸಾಹಸ ಪಡುತ್ತಿವೆ. ಇದೆಲ್ಲದರ ಮಧ್ಯೆಯೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಗ್ಯಕ್ಕೆ ಆದ್ಯತೆ ನೀಡಿ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ.

ಕಳೆದ ದಿನ ಹಾನಗಲ್ ಕ್ಷೇತ್ರದಲ್ಲಿ ಉಪ ಚುನಾವಣೆ ಪ್ರಚಾರದ ನಂತರ, ಹುಬ್ಬಳಿಯ ವಿಮಾನ ನಿಲ್ದಾಣದ ಬಳಿ ಇರುವ ಖಾಸಗಿ ಹೋಟೆಲ್ ವೊಂದರಲ್ಲಿ ಉಳಿದುಕೊಂಡಿದ್ದರು. ಇಂದು ಮುಂಜಾನೆ ಎದ್ದು ವಾಕಿಂಗ್ ಮಾಡಿ ದೈಹಿಕ ಕಸರತ್ತು ನಡೆಸಿದ ಮಾಜಿ ಸಿಎಂ ಆರೋಗ್ಯಕ್ಕೆ ಒತ್ತು ನೀಡಿದ್ದಾರೆ. ಜೊತೆಗೆ ಒತ್ತಡದ ಮದ್ಯೆಯು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತೋರಿಸಿಕೊಟ್ಟಿದ್ದಾರೆ.

ಇಂದು ಸಿಂದಗಿ ಕ್ಷೇತ್ರದ ಪ್ರಚಾರ ಕಾರ್ಯದಲ್ಲಿ ತೊಡಗಲಿರುವ ಸಿದ್ದರಾಮಯ್ಯ. ಪ್ರಚಾರಕ್ಕೆ ತೆರಳುವ ಮುನ್ನ ಸೈಕ್ಲಿಂಗ್ ಮಾಡಿದ್ದಾರೆ ಈ ವೇಳೆ ಸ್ಥಳೀಯ ನಾಯಕರು ಮಾಜಿ ಸಿಎಂ ಗೆ ಸಾಥ್ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button