Latest

ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಫ್ಲೆಕ್ಸ್ ಕಟ್ಟಿದ ಟಗರು: ಸ್ವೀಕರಿಸಲು ಸಿದ್ದರಾಮಯ್ಯ ಹಿಂದೇಟು

ಕಲಬುರಗಿ: ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಪ್ಲೇಕ್ಸ್ ಕಟ್ಟಿದ ಟಗರನ್ನು ಉಡುಗರೆಯಾಗಿ ಪಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಹಿಂದೇಟು ಹಾಕಿ ನಂತರ ಅಭಿಮಾನಿಗಳ ಒತ್ತಡಕ್ಕೆ ಮನಿದು ಉಡುಗೊರೆಯನ್ನು ಸ್ವೀಕರಿಸಿದ ಘಟನೆ ನಡೆಯಿತು.

ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣದಲ್ಲಿ ಜೆಎಂ ಕೊರಬು ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಹತ್ತು ಸಾವಿರ ಜನರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಸಿದ್ದರಾಮಯ್ಯ ಅಭಿಮಾನಿ ರಮೇಶ್ ಅನ್ನೋರು ಎರಡು ಟಗರುಗಳನ್ನು ಉಡುಗರೆಯಾಗಿ ನೀಡಲು ತಂದಿದ್ದರು. ಅದನ್ನು ಕೊಡೊದಕ್ಕೆ ವೇದಿಕೆ ಮೇಲೆ ಹೋದಾಗ ಸಮಿಪಕ್ಕೂ ತರಲು ಬಿಡದೆ ತೆಗೆದುಕೊಂಡು ಹೋಗುವಂತೆ ಸಿದ್ದರಾಮಯ್ಯ ಸೂಚಿಸಿದರು. ಅಭಿಮಾನದಿಂದ ಕೊಡುತ್ತಿದ್ದಾರೆ ಸ್ವಿಕರಿಸಿ ಅಂತ ವೇದಿಕೆ ಮೇಲೆ ಇದ್ದವರು ಹೇಳಿದರು ಕೂಡಾ ಸಿದ್ದರಾಮಯ್ಯ ಮಾತ್ರ ಅದನ್ನು ಸ್ವಿಕರಿಸದೆ ಹಿಂದಕ್ಕೆ ಕಳಿಸಿದರು. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನೋ

ಕಲಬುರಗಿ: ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಪ್ಲೇಕ್ಸ್ ಕಟ್ಟಿದ ಟಗರನ್ನು ಉಡುಗರೆಯಾಗಿ ಪಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಹಿಂದೇಟು ಹಾಕಿ ನಂತರ ಅಭಿಮಾನಿಗಳ ಒತ್ತಡಕ್ಕೆ ಮನಿದು ಉಡುಗೊರೆಯನ್ನು ಸ್ವಿಕರಿಸಿದ ಘಟನೆ ನಡೆಯಿತು.

ಕಲಬುರಗಿ ಜಿಲ್ಲೆ ಅಫಜಲಪುರ ಪಟ್ಟಣದಲ್ಲಿ ಜೆಎಂ ಕೊರಬು ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಹತ್ತು ಸಾವಿರ ಜನರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಸಿದ್ದರಾಮಯ್ಯ ಅಭಿಮಾನಿ ರಮೇಶ್ ಅನ್ನೋರು ಎರಡು ಟಗರುಗಳನ್ನು ಉಡುಗರೆಯಾಗಿ ನೀಡಲು ತಂದಿದ್ದರು. ಅದನ್ನು ಕೊಡೊದಕ್ಕೆ ವೇದಿಕೆ ಮೇಲೆ ಹೋದಾಗ ಸಮಿಪಕ್ಕೂ ತರಲು ಬಿಡದೆ ತೆಗೆದುಕೊಂಡು ಹೋಗುವಂತೆ ಸಿದ್ದರಾಮಯ್ಯ ಸೂಚಿಸಿದರು. ಅಭಿಮಾನದಿಂದ ಕೊಡುತ್ತಿದ್ದಾರೆ ಸ್ವಿಕರಿಸಿ ಅಂತ ವೇದಿಕೆ ಮೇಲೆ ಇದ್ದವರು ಹೇಳಿದರು ಕೂಡಾ ಸಿದ್ದರಾಮಯ್ಯ ಮಾತ್ರ ಅದನ್ನು ಸ್ವಿಕರಿಸದೆ ಹಿಂದಕ್ಕೆ ಕಳಿಸಿದರು. ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನೋ ಫ್ಲೆಕ್ಸ್ ಟಗರುಗಳ ಮೇಲೆ ಕಟ್ಟಿದ ಕಾರಣಕ್ಕೆ ಉಡುಗರೆಯನ್ನು ಪಡೆಯಲು ಹಿಂದೇಟು ಹಾಕಿದ್ದರು.

ಅಸಮದಾನದಿಂದ ಅಭಿಮಾನಿಗಳು ವೇದಿಕೆಯಿಂದ ಕೆಳಗೆ ಇಳಿದು ಕಾರ್ಯಕ್ರಮ ಮುಗಿಯುವರೆಗೂ ವೇದಿಕೆ ಹತ್ತಿರ ಕಾಯುತ್ತಿದ್ದರು‌. ಸಾಕಷ್ಟು ಒತ್ತಡ ಹಾಕಿ ಕಡೆಗೂ ಸಿದ್ದರಾಮಯ್ಯ ಅವರ ಮನಸ್ಸನ್ನು ಒಲಿಸಿ ಕೊನೆಯಲ್ಲಿ ಉಡುಗರೆ ನೀಡಿದರು. ಟಗರುಗಳನ್ನು ಉಡುಗರೆಯಾಗಿ ಕೊಟ್ಟ ಅಭಿಮಾನಿಗಳು ಸಂತಸಗೊಂಡು ಮುಂದಿನ ಸಿಎಂ ಸಿದ್ದರಾಮಯ್ಯ ಅಂತ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.

ಉಡುಗರೆಯನ್ನು ಪಡೆಯಲು ಹಿಂದೇಟು ಹಾಕಿದ್ದರು:

ಅಸಮದಾನದಿಂದ ಅಭಿಮಾನಿಗಳು ವೇದಿಕೆಯಿಂದ ಕೆಳಗೆ ಇಳಿದು ಕಾರ್ಯಕ್ರಮ ಮುಗಿಯುವರೆಗೂ ವೇದಿಕೆ ಹತ್ತಿರ ಕಾಯುತ್ತಿದ್ದರು‌. ಸಾಕಷ್ಟು ಒತ್ತಡ ಹಾಕಿ ಕಡೆಗೂ ಸಿದ್ದರಾಮಯ್ಯ ಅವರ ಮನಸ್ಸನ್ನು ಒಲಿಸಿ ಕೊನೆಯಲ್ಲಿ ಉಡುಗರೆ ನೀಡಿದರು. ಟಗರುಗಳನ್ನು ಉಡುಗರೆಯಾಗಿ ಕೊಟ್ಟ ಅಭಿಮಾನಿಗಳು ಸಂತಸಗೊಂಡು ಮುಂದಿನ ಸಿಎಂ ಸಿದ್ದರಾಮಯ್ಯ ಅಂತ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button