Latest

ಬಿಟ್ ಕಾಯಿನ್ ದಂಧೆಯಲ್ಲಿ ಫ್ರಭಾವಿಗಳಿದ್ದಾರೆ, ಸೂಕ್ತ ತನಿಖೆ ನಡೆಸಬೇಕು: ಸಿದ್ದರಾಮಯ್ಯ ಒತ್ತಾಯ

ಧಾರವಾಡ: ಬಿಟ್ ಕಾಯಿನ್ ದಂಧೆಯಲ್ಲಿ ಹಲವು ಪ್ರಭಾವಿಗಳಿದ್ದಾರೆ.‌ ಅದರಲ್ಲಿ ಕೆಲವರನ್ನು ರಕ್ಷಣೆ ಮಾಡಲಾಗುತ್ತಿದ್ದು, ಪ್ರಭಾವಿಗಳ ಹೆಸರನ್ನು ಮುಚ್ಚಿ ಹಾಕಲು ಕೇಂದ್ರ ತನಿಖಾ ಸಂಸ್ಥೆಗಳು ಪ್ರಯತ್ನ ಮಾಡುತ್ತಿವೆ ಎಂಬ ಮಾಹಿತಿ ಇದೆ.‌ ಹಾಗಾಗಿ ಇಲ್ಲಿ ಯಾರನ್ನು ರಕ್ಷಣೆ ಮಾಡದೇ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂಧಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ದಂಧೆಯಲ್ಲಿ ಯಾರನ್ನೋ ರಕ್ಷಿಸುವ ಕೆಲಸ ಆಗಬಾರದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಈ ಹಿಂದೆನೇ ನಾನು ಹೇಳಿದ್ದೇನೆ. ಆದರೆ ಇಷ್ಟು ದಿನ ಬಿಟ್ಟು ಈಗ ಮುಖ್ಯಮಂತ್ರಿಗಳು ಇಡಿಗೆ ರೆಫರ್ ಮಾಡಿದ್ದಾಗಿ ಹೇಳುತ್ತಿದ್ದಾರೆ. ಹಾಗಿದಲ್ಲಿ ಮುಖ್ಯಮಂತ್ರಿಗಳ ಇಷ್ಟು ದಿನ ಯಾಕೆ ಸುಮ್ಮನಿದ್ದಾರೆ.? ಸಿಎಂ ಅವರ ಈ ನಡೆ ನೋಡಿದ್ದರೆ ಇಷ್ಟುದಿನ ಕೆಲವರಿಗೆ ಅಲ್ಲಿ ರಕ್ಷಣೆ ನೀಡಿದ್ದಾರೆ ಎನ್ನುವುದು ತಿಳಿಯುತ್ತದೆ. ಇದರ ಕುರಿತು ಇನಷ್ಟು ನಾವು ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ ಎಂದರು.

ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಒಲವು ಹೆಚ್ಚಾಗಿದೆ. ಹಾನಗಲ್‌ನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ಹಾಗೇ ಸಿಂದಗಿಯಲ್ಲೂ ಕೂಡಾ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹಾನಗಲ‌ನಲ್ಲಿ ಒಂದೇ ಒಂದು ರಸ್ತೆ ಅಭಿವೃದ್ಧಿ ಆಗಿಲ್ಲ. ನಾವು ಅಧಿಕಾರದಲ್ಲಿ ಇದ್ದಾಗ ಮಾಡಿರುವ ರಸ್ತೆಗಳು ಈಗಲೂ ಇವೆ. ಹಾನಗಲ್​​​​​ ದಿಂದ ಬಂಕಾಪುರ ಹಾಗೂ ಹಾನಗಲ್ ನಿಂದ ಶಿಕಾರುಪುರಕ್ಕೆ ರಸ್ತೆ ಮಾಡಿರುವುದು ನಾವು. ಬಿಜೆಪಿಯವರು ಹಾನಗಲ್ ಕ್ಷೇತ್ರದಲ್ಲಿ ಯಾವ ರಸ್ತೆ ಮಾಡಿದ್ದಾರೆ ಎಂಬುವುದನ್ನು ತೋರಿಸಲಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Related Articles

Leave a Reply

Your email address will not be published.

Back to top button