Latest

ತ್ರಿಪುರಾದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಯುಎಪಿಎ ಜಾರಿ

ಅಗರ್ತಲ: ಕೋಮುಹಿಂಸೆಯ ಕುರಿತಾಗಿ ವರದಿ ಮಾಡಿರುವುದಕ್ಕೆ ತ್ರಿಪುರಾದಲ್ಲಿ102 ಸಾಮಾಜಿಕ ಮಾಧ್ಯಮಗಳ ಮೇಲೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಯುಎಪಿಎ ಜಾರಿಗೊಳಿಸಿದೆ.

ತ್ರಿಪುರಾದಲ್ಲಿ ಕೋಮು ಹಿಂಸಾಚಾರದ ಕುರಿತು ವರದಿ ಮಾಡುತ್ತಿದ್ದ ಹಾಗೂ ಬರೆಯುತ್ತಿದ್ದವರ ವಿರುದ್ಧ ಕ್ರಮದಿಂದ ಆಘಾತವಾಗಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ.

ತ್ರಿಪುರಾ ಉರಿಯುತ್ತಿದೆ ಎಂದು ಟ್ವೀಟ್ ಮಾಡಿದ ಪತ್ರಕರ್ತ ಶ್ಯಾಮ್ ಮೀರಾ ಸಿಂಗ್ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಇದು ಅತ್ಯಂತ ಗೊಂದಲದ ಪ್ರವೃತ್ತಿಯಾಗಿದೆ. ಕೇವಲ ಕೋಮು ಹಿಂಸಾಚಾರದ ಬಗ್ಗೆ ವರದಿ ಮಾಡಿದ್ದಕ್ಕೆ ಹಾಗೂ ಪ್ರತಿಭಟಿಸಿರುವುದಕ್ಕೆ ಕಾಯ್ದೆ ಬಳಸಲಾಗುತ್ತಿದೆ. ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ರಾಜ್ಯ ಸರ್ಕಾರದ ಪ್ರಯತ್ನಿಸುತ್ತಿದೆ ಎಂದು ಎಂದು ಎಡಿಟರ್ಸ್ ಗಿಲ್ಡ್ ಆರೋಪಿಸಿದ್ದು, ಗಲಭೆಯ ಕುರಿತಾಗಿ ಮುಕ್ತ ಮತ್ತು ನ್ಯಾಯಯುತ ತನಿಖೆಯಾಗಬೇಕು ಎಂದು ಆಗ್ರಹಿಸಿದೆ

Related Articles

Leave a Reply

Your email address will not be published.

Back to top button