Latest

ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಚಿಂತಕ ಜೆ ಕೆ ಗೋವಿಂದರಾವ್

ಧಾರವಾಡ: ಕನ್ನಡ ಚಿತ್ರರಂಗದ ಹಿರಿಯ ನಟ, ಚಿಂತಕ ಜಿ.ಕೆ.ಗೋವಿಂದರಾವ್ ಅವರು ಇಂದು ಬೆಳಗಿನ ಜಾವ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ‌ ನಿಧನರಾಗಿದ್ದು, ಸಾವಿನಲ್ಲೂ ಗೋವಿಂದರಾವ್ ಅವರು ಎರಡು ಕಣ್ಣಗಳನ್ನು ದಾನ ಮಾಡುವ ಮೂಲಕ ಸಾರ್ಥಕತೆ ತೋರಿದ್ದಾರೆ.

ಹುಬ್ಬಳ್ಳಿ ಗೋಲ್ಡನ್‌ ಟೌನ್‌ ಬಡಾವಣೆಯ ತಮ್ಮ ಪುತ್ರಿಯ ನಿವಾಸದಲ್ಲಿ ಜಿ.ಕೆ.ಗೋವಿಂದರಾವ್ ನಿಧನರಾಗಿದ್ದಾರೆ. ಗೋವಿಂದರಾವ್ ಅವರು ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ನೇತ್ರದಾನ ಮಾಡಿದ್ದಾರೆ. ಗೋವಿಂದರಾವ್ ಅವರ ಅಳಿಯ (ಶ್ಯಾಮಲಾ ಅವರ ಪತಿ) ಗುರುಪ್ರಸಾದ್ ಎಂ.ಎಂ. ಜೋಶಿ ಆಸ್ಪತ್ರೆಯಲ್ಲಿ ನೇತ್ರ ತಜ್ಞರಾಗಿದ್ದಾರೆ. ತಮ್ಮ ಮರಣದ ಬಳಿಕ ನೇತ್ರದಾನ ಮಾಡಬೇಕು ಎಂಬುದು ಗೋವಿಂದರಾವ್ ಅವರ ಆಸೆಯಾಗಿತ್ತು. ಅದರಂತೆ ನೇತ್ರದಾನ ಮಾಡಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಇನ್ನೂ ವಿಜಯ ದಶಮಿ‌‌ ಹಬ್ಬವಿರುವುದರಿಂದ ಕುಟುಂಬಸ್ಥರು, ಕೇಶ್ವಾಪುರದ ಮುಕ್ತಿಧಾಮದಲ್ಲಿ ಗೋವಿಂದರಾವ ಅವರ ಅಂತ್ಯಕ್ರಿಯೆ ಕಾರ್ಯವನ್ನು ಪೂರ್ಣಮಾಡಿದ್ದಾರೆ.

Related Articles

Leave a Reply

Your email address will not be published.

Back to top button