Latest
ಸೌರವ್ಯೂಹದ ಹೊರಗಿನ ನಕ್ಷತ್ರ ಮಂಡಲಗಳಿಂದ ರೇಡಿಯೋ ಸಿಗ್ನಲ್ ಗಳ ಪತ್ತೆ
ಲಂಡನ್: ವಿಶ್ವದಲ್ಲಿ ಖಗೋಳ ತಂತ್ರಜ್ಞಾನವು ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ನೆದರ್ ಲ್ಯಾಂಡಿನ ಜಗತ್ತಿನ ಶಕ್ತಿಶಾಲಿ ರೇಡಿಯೋ ಆಂಟೇನಾ ʼಲೊ ಫ್ರಿಕ್ವಿನ್ಸಿ ಆರ್ ಎ ಯಿಂದ ಸೌರವ್ಯೂಹದ ಆಚೆಗಿನ ನಕ್ಷತ್ರ ಮಂಡಲಗಳಿಂದ ರೇಡಿಯೋ ಸಿಗ್ನಲ್ ಗಳು ಪತ್ತೆಯಾಗಿರುವುದು ವರದಿಯಾಗಿದೆ.
ನಕ್ಷತ್ರ ಮಂಡಲದೊಳಗೆ ಸುತ್ತುವ ಗ್ರಹಗಳಿಂದ ರೇಡಿಯೋ ಸಂಕೇತ ಬಂದಿರಬಹುದೆಂದು ಅಂದಾಜಿಸಲಾಗಿದೆ. ಕ್ವೀನ್ಸ್ ಲ್ಯಾಂಡ್ ಯೂನಿವರ್ಸಿಟಿಯ ವಿಜ್ಞಾನಿ ಡಾ.ಬೆಂಜಮಿನ್ ಪೋಪ್ ಮತ್ತು ನೆದರ್ ಲ್ಯಾಂಡಿನ ರಾಷ್ಟ್ರೀಯ ಖಗೋಳ ವೀಕ್ಷಣಾಲಯ ಆಸ್ಟ್ರೋನಿನ ತಂತ್ರಜ್ಞರು ಈ ರೇಡಿಯೋ ಸಿಗ್ನಲ್ ಗಳನ್ನು ಪತ್ತೆಮಾಡಿದ್ದಾರೆ.
ಈ ಸಂಶೋಧನೆಯು ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವತೆ ಪಡೆದಿದೆ. ಇನ್ನುಮುಂದೆ ಸೌರಮಂಡಲದಾಚೆಗಿನ ಗ್ರಹಗಳ ರೇಡಿಯೋ ಸಿಗ್ನಲ್ ಗಳು ಹಾಗೂ ದೂರದ ಗ್ರಹಗಳಲ್ಲಿ ಜೀವಿಗಳಿರುವ ಸಾಧ್ಯತೆಗಳ ಬಗ್ಗೆಯೂ ಸುಳಿವು ನೀಡಲಿದೆ ಎಂದು ಡಾ. ಬೆಂಜಮಿನ್ ಪೋಪ್ ತಿಳಿಸಿದ್ದಾರೆ.