Latestಸಿನಿಮಾ

ಕೋಟಿಗೊಬ್ಬ-3 ಇಂದಲ್ಲ ನಾಳೆ ರಿಲೀಸ್: ಅಭಿಮಾನಿಗಳಿಗೆ ನಿರಾಸೆ

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೋಟಿಗೊಬ್ಬ-3 ಸಿನಿಮಾ ಬಿಡುಗಡೆಗಾಗಿ ಥಿಯೇಟರ್ ಮುಂದೆ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ನಿರಾಸೆಯಾಗಿದೆ. ಇಂದು ಕೋಟಿಗೊಬ್ಬ-3 ಚಿತ್ರ ಬಿಡುಗಡೆಯಾಗಲ್ಲ ಎಂದು ಇದೀಗ ಚಿತ್ರತಂಡ ಮಾಹಿತಿ ನೀಡಿದೆ.

ಈ ಕುರಿತು ಕೋಟಿಗೊಬ್ಬ-3 ಚಿತ್ರ ನಿರ್ಮಾಪಕ ಸೂರಪ್ಪ ಬಾಬು ಸ್ಪಷ್ಟಪಡಿಸಿದ್ದು, ಇಂದು ಚಿತ್ರ ಬಿಡುಗಡೆಯಾಗಲ್ಲ. ಕೋಟಿಗೊಬ್ಬ-3 ಚಿತ್ರ ಇಂದು ಬಿಡುಗಡೆಯಾಗದಿರಲು ಹಲವು ಕಾರಣಗಳಿವೆ. ಇದರ ಹಿಂದೆ ಷಡ್ಯಂತ್ರವಿದೆ. ಈ ವಿಚಾರದಲ್ಲಿ ನನ್ನದೇನೂ ತಪ್ಪಿಲ್ಲ. ದಯವಿಟ್ಟು ಅಭಿಮಾನಿಗಳು ಕ್ಷಮಿಸಬೇಕು. ಎಲ್ಲಾ ವಿಷಯವೂ ಕಿಚ್ಚ ಸುದೀಪ್ ಅವರಿಗೂ ಗೊತ್ತಿದೆ. ನಾಳೆ ಬೆಳಿಗ್ಗೆ ಕೋಟಿಗೊಬ್ಬ-3 ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಮಧ್ಯಾಹ್ನದ ಬಳಿಕವಾದರೂ ಕೋಟಿಗೊಬ್ಬ-3 ಬಿಡುಗಡೆಯಾಗಲಿದೆ, ಕಿಚ್ಚನ ಅಭಿನಯ ಕಣ್ತುಂಬಿಕೊಳ್ಳಬಹುದು ಎಂದು ಥಿಯೇಟರ್ ಮುಂದೆ ಕಾಯುತ್ತಿದ್ದ ಅಭಿಮಾನಿಗಳು ನಿರಾಶರಾಗಿದ್ದಾರೆ. ಇಂದು ಚಿತ್ರ ಬಿಡುಗಡೆಯಾಗುವುದಾಗಿ ಹೇಳಿ ಈಗ ಮಧ್ಯಾಹ್ನದವರೆಗೂ ನಮ್ಮನ್ನು ಕಾಯಿಸಿ ಏಕಾಏಕಿ ಇಂದು ಸಿನಿಮಾ ಬಿಡುಗಡೆಯೇ ಆಗಲ್ಲ ಎಂದು ನಿರ್ಮಾಪಕರು ಹೇಳುತ್ತಿರುವುದು ಸರಿಯಲ್ಲ. ಅಭಿಮಾನಿಗಳು ನಿರ್ಮಾಪಕರ ಮನೆ ಮುಂದೆ ಧರಣಿ ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ, ವಿಜಯಪುರದಲ್ಲಿ ಅಭಿಮಾನಿಗಳಿಂದ ದಾಂದಲೆ

ಇಂದು ಬಿಡುಗಡೆಯಾಗಬೇಕಿದ್ದಂತ ಸುದೀಪ್ ನಟನೆಯ ಕೋಟಿಗೊಬ್ಬ-3 ಚಿತ್ರ ಬಿಡುಗಡೆಯಾಗಿರಲಿಲ್ಲ. ಟಿಕೆಟ್ ಪಡೆದ ಅಭಿಮಾನಿಗಳಿಗೆ ಶೋ ರದ್ದಾಗಿದ್ದರಿಂದಾಗಿ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಬೆಳಗಾವಿ ಹಾಗೂ ವಿಜಯಪುರದಲ್ಲಿ ರೊಚ್ಚಿಗೆದ್ದಂತ ನಟ ಸುದೀಪ್ ಅಭಿಮಾನಿಗಳು, ಕೋಟಿಗೊಬ್ಬ-3 ಚಿತ್ರ ರದ್ದಾಗಿದ್ದರಿಂದಾಗಿ ಪ್ಲೆಕ್ಸ್ ಹರಿದಿದ್ದಲ್ಲದೇ, ಚಿತ್ರಮಂದಿರಗಳ ಮೇಲೂ ಕಲ್ಲು ತೂರಾಟ ನಡೆಸಿರೋ ಘಟನೆ ನಡೆದಿದೆ.

Related Articles

Leave a Reply

Your email address will not be published.

Back to top button