ರಾಮನಗರ: ನಟ ಪುನೀತ್ ರಾಜ್ಕುಮಾರ್ ಅವರ ಅಗಲಿಕೆ ನೋವನ್ನು ತಾಳಲಾರದೆ ಅಭಿಮಾನಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೊತೆಗೆ ಕೌಟುಂಬಿಕ ಕಾರಣಕ್ಕೆ ಯುವಕ ನೇಣು ಬಿಗಿದುಕೊಂಡಿದ್ದು, ಕುಟುಂಬಸ್ಥರು ಇದನ್ನು ಮರೆ ಮಾಚುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಪುನೀತ್ ನಿಧನರಾಗಿ 6 ದಿನ ಕಳೆದರೂ ಅಭಿಮಾನಗಳ ದುಃಖ, ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ. ಇಂತಹ ವಿಷಾದನೀಯ ಸ್ಥಿತಿಯಲ್ಲಿ ಅಭಿಮಾನಿಗಳು ಧೈರ್ಯಗೆಡಬಾರದು, ತಾಳ್ಮೆ ತಂದುಕೊಳ್ಳಬೇಕು. ಪುನೀತ್ ಅವರು ಎಂದೂ ಇಂತಹದ್ದನ್ನು ಸಹಿಸಲ್ಲ ಎಂದು ಸ್ವತಃ ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಪದೇ ಪದೆ ಮನವಿ ಮಾಡುತ್ತಿದ್ದಾರೆ. ಆದರೇ ಚನ್ನಪಟ್ಟಣದ ಎಲೆಕೇರಿ ನಿವಾಸಿ ವೆಂಕಟೇಶ್ ಎಂಬಾತ ವೆಂಕಟೇಶ್(25) ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪುನೀತ್ ಅಪ್ಪಟ ಅಭಿಮಾನಿಯಾಗಿದ್ದ ಈತ, ತನ್ನ ಕೈ ಮೇಲೆ ‘ಪವರ್ ಸ್ಟಾರ್’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದ. ಅಲ್ಲದೇ ಪುನೀತ್ ಜೊತೆಗೆ ಫೋಟೋ ಕೂಡ ತೆಗೆಸಿಕೊಂಡಿದ್ದ. ಕ್ಷೌರಿಕ ವೃತ್ತಿ ಅ.29ರಂದು ಪುನೀತ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತಗೊಂಡಿದ್ದ. ಅಂತ್ಯಸಂಸ್ಕಾರದ ಬಳಿಕ ಖಿನ್ನತೆಗೆ ಒಳಗಾಗಿದ್ದ. ಊಟ ಬಿಟ್ಟು ಕಣ್ಣೀರಿಡುತ್ತಿದ್ದ ಎಂದು ಹೇಳಲಾಗುತ್ತಿದೆ.
ಗುರುವಾರ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗನ ಆತ್ಮಹತ್ಯೆಯಿಂದ ಕಂಗಾಲಾಗಿರುವ ಪೋಷಕರು, ಮಗನ ನೇತ್ರದಾನಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅನುಮಾನಕ್ಕೆ ಎಡೆ?:
ಇದೀಗ ಆತ್ಮಹತ್ಯೆ ಬಳಿಕ ಪುನೀತ್ ಅಭಿಮಾನಿ ಎಂದು ಬಿಂಬಿಸುತ್ತಿರುವ ಕುಟುಂಬಸ್ಥರು ಪುನೀತ್ ಅಭಿಮಾನಿ ಎಂದು ಬಿಂಬಿಸಿದರೆ ಸಹಾಯವಾಗುತ್ತೆ ಎಂಬ ನಂಬಿಕೆಯಿಂದ ಹಲವು ವರ್ಷಗಳ ಹಿಂದೆ ಪುನೀತ್ ಜೊತೆ ಫೋಟೋ ತಗೆಸಿಕೊಂಡಿದ್ದ ವೆಂಕಟೇಶ್ ಆ ಪೋಟೋ ಮುಂದಿಟ್ಟುಕೊಂಡು ಪುನೀತ್ ಅಭಿಮಾನಿ ಎಂದು ಕುಟುಂಬಸ್ಥರ ಜೊತೆಗೆ ಕೆಲವರು ಬಿಂಬಿಸುತ್ತಿದ್ದಾರೆ ಎಂದು ಪೊಲೀಸ್ ಉನ್ನತ ಮೂಲಗಳ ಮಾಹಿತಿ ಲಭ್ಯವಾಗುತ್ತಿದ್ದು, ಈ ಬಗ್ಗೆ ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರ ಬೀಳ ಬೇಕಿದೆ.