Latest

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದ್ದು ಆತಂಕ ಮನೆ ಮಾಡಿದೆ. ಕಳೆದ ಕೆಲ ದಿನಗಳ ಹಿಂದೆ ಬಾರಿ ಮಳೆಯಿಂದಾಗಿ ಈ ಮೊದಲು ಭೂಕುಸಿತ ಉಂಟಾಗಿತ್ತು. ಈಗ ಮತ್ತೆ ಅದೇ ಪ್ರದೇಶದಲ್ಲಿ ಭೂಮಿ ಬಿರುಕು ಬಿಟ್ಟಿದೆ.

ಚಾಮುಂಡಿ ಬೆಟ್ಟದಿಂದ ನಂದಿಗೆ ತೆರಳುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಂದಿಗೆ ತೆರಳುವ ಮಾರ್ಗವನ್ನು ಜಿಲ್ಲಾಡಳಿತ ಬಂದ್ ಮಾಡಿದೆ. ಭಾರಿ ಮಳೆಯಿಂದಾಗಿ  ಇತ್ತೀಚೆಗೆ ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ರಸ್ತೆ ಕುಸಿದಿತ್ತು.

ಆದರೆ ಅದರ ದುರಸ್ತಿ ಕಾರ್ಯ ವಿಳಂಬ ಹಿನ್ನೆಲೆ ಇದೀಗ ಮತ್ತೆ  ಅದೇ ಜಾಗದಲ್ಲಿ ಭೂ ಕುಸಿತವಾಗಿದೆ. ಈ ಹಿಂದೆ ಕುಸಿದಿದ್ದ ರಸ್ತೆಯ ದುರಸ್ತಿ ವಿಳಂಬ ಹಿನ್ನೆಲೆ ಸುಮಾರು 70 ಅಡಿಯಷ್ಟು ರಸ್ತೆ ತಡೆಗೋಡೆ ಸಹಿತ ಕುಸಿದಿದೆ.

ಅಕ್ಟೋಬರ್ 20ರಂದು ಭಾರಿ ಮಳೆಗೆ ರಸ್ತೆ ಕುಸಿದಿತ್ತು. ಸ್ಥಳಕ್ಕೆ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್  ಸಹ ಭೇಟಿ ನೀಡಿ ದುರಸ್ತಿಗೆ ಸೂಚಿಸಿದ್ದರು.

ದುರಸ್ತಿ ಕಾರ್ಯ ವಿಳಂಬ ಹಿನ್ನೆಲೆ ಮತ್ತದೇ ಜಾಗದಲ್ಲಿ ಭೂ ಕುಸಿತ ಉಂಟಾಗಿದೆ. ದುರಸ್ತಿ ಕಾರ್ಯ ವಿಳಂಬವಾದರೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ದುರಸ್ತಿಗೆ ತಜ್ಞರು ಸಲಹೆ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದಲೂ ಆಗಿಂದಾಗ್ಗೆ ಮಳೆ ಬೀಳುತ್ತಿರುವುದರಿಂದ ಚಾಮುಂಡಿ ಬೆಟ್ಟದಲ್ಲಿ ಪದೇ ಪದೆ ಬೆಟ್ಟ ಕುಸಿಯುತ್ತಿದೆ. ಜಿಲ್ಲಾಡಳಿತ ಈಗಲಾದರೂ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.

Related Articles

Leave a Reply

Your email address will not be published. Required fields are marked *

Back to top button