Latest

ಚಂದನ್ ಶೆಟ್ಟಿ ರಸಮಂಜರಿಯಲ್ಲಿ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ, ಜನರು, ಮಕ್ಕಳು…!

ದಾವಣಗೆರೆ: ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಶಾಸಕ ಎಂ. ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಇನ್ನು ರಾಕ್ ಸ್ಟಾರ್ ಚಂದನ್ ಶೆಟ್ಟಿಯಿಂದ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಮಕ್ಕಳೊಂದಿಗೆ ಕುಣಿದು ಕುಪ್ಪಳಿಸಿದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಆಯೋಜನೆ ಮಾಡಲಾಗಿದ್ದ ಈ ಸಂಗೀತ ಸಂಜೆ ಸಮಾರಂಭದಲ್ಲಿ ಜನರು ಹುಚ್ಚೆದ್ದು ಕುಣಿದರು.

ಚಂದನ್ ಶೆಟ್ಟಿ, ಸರಿಗಮಪ ಖ್ಯಾತಿಯ ಚನ್ನಪ್ಪ ಸೇರಿದಂತೆ ವಿವಿಧ ಕಲಾವಿದರು ಹಾಡುಗಳನ್ನು ಹಾಡುವ ಮೂಲಕ ರಂಜಿಸಿದರು‌. ವಿವಿಧ ಕನ್ನಡ ಚಿತ್ರಗೀತೆಗನ್ನು ಹಾಡಿ ರಂಜಿಸಿದರು. ಹಾಡಿಗೆ ಸಖತ್ ಸ್ಟೆಪ್ ಹಾಕಿ ಕುಂದೂರಿನ ಜನತೆ ಕುಣಿದರು. ಗ್ರಾಮ ವಾಸ್ತವ್ಯದ ಹಿನ್ನೆಲೆಯಲ್ಲಿ ಜನರಿಗೆ ಮನೋರಂಜನೆ ನೀಡಲು ಹಮ್ಮಿಕೊಂಡಿರುವ ರಸ ಮಂಜರಿ ಕಾರ್ಯಕ್ರಮ ಗಮನ ಸೆಳೆಯಿತು.

ಮಕ್ಕಳೊಂದಿಗೆ ಮಕ್ಕಳಾದ ಎಂ ಪಿ ರೇಣುಕಾಚಾರ್ಯ “ಸುಂಟರಗಾಳಿ” ಚಿತ್ರದ ಹಾಡಿಗೆ ಮಕ್ಕಳೊಂದಿಗೆ ಹೆಜ್ಜೆ ಹಾಕಿದರು. ಕಾಲು ನೋವಿದ್ದರೂ ಅದನ್ನು ಮರೆತು ಮಕ್ಕಳೊಂದಿಗೆ ಹೆಜ್ಜೆ ಹಾಕಿದರಲ್ಲದೇ, ಮಕ್ಕಳಿಗೆ ಹುರುಪು ತುಂಬಿದರು.

ಇದೇ ವೇಳೆ ವೇದಿಕೆ ಮೇಲೆ ಹೊನ್ನಾಳಿ‌ – ನ್ಯಾಮತಿ ಅವಳಿ ತಾಲೂಕಿನ ಜನರಿಗೆ ರೇಣುಕಾಚಾರ್ಯ ನಮಸ್ಕರಿಸಿದರು. ವೇದಿಕೆ ಮೇಲೆ ದೀರ್ಘ ದಂಡ ನಮಸ್ಕಾರ ಮಾಡಿ‌ ಹೊನ್ನಾಳಿ‌ ಜನರಿಗೆ ನಮಸ್ಕರಿಸಿದರು‌. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕು ನನ್ನ ಜನ್ಮಭೂಮಿ ಕರ್ಮ‌ಭೂಮಿ. ನಾನು ಯಾವುದಕ್ಕೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

Related Articles

Leave a Reply

Your email address will not be published.

Back to top button