Latest

ರೇವ್​ ಪಾರ್ಟಿ ಮೇಲೆ ದಾಳಿ ; ಶಾರುಖ್​​ ಖಾನ್​​​ ಪುತ್ರ ಸೇರಿ 13 ಮಂದಿ ವಶಕ್ಕೆ ಪಡೆದ ಎನ್ ಸಿಬಿ

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಸೇರಿದಂತೆ 13 ಜನರನ್ನು ವಶಕ್ಕೆ ಪಡೆದಿರುವ ಎನ್ ಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಮುಂಬೈ ಸಮುದ್ರದ ಮಧ್ಯೆ ಐಷಾರಾಮಿ ಕ್ರೂಸರ್ ಹಡಗಿನಲ್ಲಿ ರೇವ್ ಪಾರ್ಟಿ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಹಲವು ಉದ್ಯಮಿಗಳ ಮಕ್ಕಳು, ಸೆಲೆಬ್ರಿಟಿಗಳ ಮಕ್ಕಳು ಡ್ರಗ್ಸ್ ಪಾರ್ಟಿಯಲ್ಲಿ ತೊಡಗಿದ್ದರು ಎನ್ನಲಾಗಿದೆ.

ಸದ್ಯ 8 ಜನರ ಹೆಸರನ್ನು ಎನ್ ಸಿಬಿ ಬಹಿರಂಗ ಮಾಡಿದೆ. ಆರ್ಯನ್ ಖಾನ್, ಮುನ್ ಮುನ್ ಧೇಚಾ, ಇಸ್ಮಿತ್ ಸಿಂಗ್, ವಿಕ್ರಾಂತ್ ಜೋಕರ್, ಅರ್ಬಾಜ್ ಮರ್ಚೆಂಟ್, ನೂಪೂರ್ ಸಾರಿಕಾ, ಮೋನಿಕಾ ಜೈಸ್ವಾಲ್, ಗೋಮಿತ್ ಚೋಪ್ರಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. 13 ಜನರಲ್ಲಿ ಮೂವರು ದೊಡ್ಡ ಮಹಿಳಾ ಉದ್ಯಮಿಗಳೆಂದು ತಿಳಿದು ಬಂದಿದೆ.

ಪಾರ್ಟಿಯಲ್ಲಿ ಒಬ್ಬರಿಗೆ 80 ರಿಂದ 2 ಲಕ್ಷ ರೂಪಾಯಿ ವರೆಗೆ ಟಿಕೆಟ್ ದರ ವಿಧಿಸಲಾಗಿತ್ತು. ಪಾರ್ಟಿಯಲ್ಲಿ 600ಕ್ಕೂ ಹೆಚ್ಚು ಹೈ ಪ್ರೊಫೈಲ್ ವ್ಯಕ್ತಿಗಳು ಭಾಗಿಯಾಗಿದ್ದರು. ಕೊಕೇನ್, ಹಾಶಿಶ್ ಸೇರಿದಂತೆ ವಿವಿಧ ಮಾದರಿಯ ಡ್ರಗ್ಸ್ ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ. ವಶಕ್ಕೆ ಪಡೆಯಲಾದ 10 ಜನರಲ್ಲಿ ಇಬ್ಬರು ಹರಿಯಾಣ ಮತ್ತು ದೆಹಲಿ ಮೂಲದ ಡ್ರಗ್​ ಪೆಡ್ಲರ್​ಗಳು ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button